ಹುಬ್ಬಳ್ಳಿ: ಅಂತರ ಜಿಲ್ಲಾ ಬೈಕ್ ಕಳ್ಳನನ್ನು ಬಂಧಿಸುವಲ್ಲಿ ಶರಹ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಆಂಧ್ರಪ್ರದೇಶ ಮೂಲದ ಬಳ್ಳಾರಿ ಜಿಲ್ಲೆಯ ಗೋಟೂರ ಗ್ರಾಮದ ನಿವಾಸಿ ಗೌನಿ ನರೇಂದ್ರ ರೆಡ್ಡಿ (33) ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಕಳೆದ ನ.4 ರಂದು ಕೆಜಿಪಿ ಜುವೇಲರಿ ಮಹಾದೇವಿ ಸಿಲ್ಕ್ ಆ್ಯಂಡ್ ಸಾರೀಸ್’ನ ಮ್ಯಾನೇಜರ್ ಕಮಲಾಕರ ದೈವಜ್ಞ ಎಂಬಾತರು ಲ್ಯಾಮಿಂಗ್ಟನ್ ರಸ್ತೆಯಲ್ಲಿ ತಮ್ಮ ಬೈಕ್ ನಿಲ್ಲಿಸಿದ ಸಂದರ್ಭದಲ್ಲಿ ಯಾರೋ ಕಳ್ಳರು ಬೈಕ್ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದರು. ಈ ಬಗ್ಗೆ ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಳಿಕ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶರಹ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಮ್.ಎಮ್.ತಹಶಿಲ್ದಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೆತ್ತಿಕೊಂಡು ಬೈಕ್ ಕಳ್ಳನನ್ನು ಸೆರೆ ಹಿಡಿದಿದ್ದಾರೆ.
ಸದ್ಯ ಆರೋಪಿ ತನಿಖೆ ನಡೆಸಿದಾಗ ದಾವಣಗೆರೆ, ಹರಿಹರ, ಬಳ್ಳಾರಿ, ಧಾರವಾಡ ಶರಹಗಳಲ್ಲಿ ಕಳ್ಳತನ ಮಾಡಿರುವ ಕುರಿತು ತಪ್ಪೊಪ್ಪಿಕೊಂಡಿದ್ದಾನೆ. ಹೀಗಾಗಿ ಈತನಿಂದ 3 ಲಕ್ಷ ಕಿಮ್ಮತ್ತಿನ 4 ಬೈಕ್ ಹಾಗೂ ಒಂದು ಸ್ಕೂಟರ್ ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಶರಹ ಪೊಲೀಸ್ ಠಾಣೆಯ ಪಿಎಸ್ಐ ವಿನೋದ್ ದೊಡ್ಡಲಿಂಗಪ್ಪನವರ, ಮಾರುತಿ ಆರ್, ಎ.ಎಸ್.ಐ ದಾಸಣ್ಣವರ, ವಿಠ್ಠಲ ಭೋವಿ, ಸಿಬ್ಬಂದಿಗಳಾದ ಶಂಕರಗೌಡಾ, ಹೊಸಮನಿ, ಕನಕಪ್ಪ ರಗಣಿ, ರಾಮರಾವ್ ರಾಠೋಡ, ರವಿ ಕೆಂದೂರ, ರುದ್ರಪ್ಪ ಹೊರಟ್ಟಿ, ಸುಧಾಕರ ನೇಸೂರ, ಈಶ್ವರಪ್ಪ ಕುರಿವಿನಶೆಟ್ಟಿ, ವಾಯ್.ಎಮ್.ಶೇಂಡ್ಗೆ ಸೇರಿದಂತೆ ಮುಂತಾದವರು ಇದ್ದರು.