ಹುಬ್ಬಳ್ಳಿ: ಇತ್ತೀಚಿಗೆ ನಿಧನ ಹೊಂದಿದ ಹುಬ್ಬಳ್ಳಿ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಮಂಜುನಾಥ ಮೆಣಸಿನಕಾಯಿ ಅವರ ಕುಟುಂಬಕ್ಕೆ ಸ್ನೇಹಿತರ ಬಳಗದ ವತಿಯಿಂದ 1,08,000 ಸಾವಿರ ರೂ. ನಗದನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮಕ್ಕೆ ಭೇಟಿ ನೀಡಿದ 2002 ನೇ ಪೊಲೀಸ್ ಬ್ಯಾಚ್ ನ ಸ್ನೇಹಿತರ ಬಳಗದಿಂದ ಸಹಾಯಾರ್ಥವಾಗಿ ದಿ. ಮಂಜುನಾಥ ಅವರ ತಂದೆಯವರಾದ ಶೇಖಪ್ಪ ಮೆಣಸಿನಕಾಯಿ ಅವರಿಗೆ 1 ಲಕ್ಷ ರೂ. ಚೆಕ್ ಹಾಗೂ 8 ಸಾವಿರ ರೂ. ನೀಡಿದ್ದಾರೆ.
ಶಿವಾನಂದ್ ಎಂ ತಿರಕಣ್ಣವರ್, ಮಲ್ಲಿಕಾರ್ಜುನ್ ದನಿಗೊಂಡ್, ಪರಶುರಾಮ್ ಮರಿಯಪ್ಪನವರ್, ಚಂದ್ರಶೇಕರ್ ಸಾಳುಂಕೆ ಹಾಗೂ ಸ್ನೇಹಿತರ ಈ ಮಾನವೀಯ ಕಾರ್ಯಕ್ಕೆ ದಿ. ಮಂಜುನಾಥ ಅವರ ತಂದೆಯವರು ಕೃತಜ್ಞತೆ ಸಲ್ಲಿಸಿದ್ದು, ಸ್ಥಳೀಯರು ಹಾಗೂ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.