ಹುಬ್ಬಳ್ಳಿ: ಹು-ಧಾ ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆಯಾಗಿದ್ದು, ಪೊಲೀಸ್ ಇಲಾಖೆಯಲ್ಲಿನ ಅಧಿಕಾರಿಗಳ ವರ್ಗಾವಣೆಯನ್ನು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ
ಹುಬ್ಬಳ್ಳಿಯ ಉತ್ತರ ವಿಭಾಗದ ಉಪ ಪೊಲೀಸ್ ಆಯುಕ್ತರಾಗಿದ್ದ ಬಲ್ಲಪ್ಪ ನಂದಗಾವಿ ಅವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಉತ್ತರ ಉಪವಿಭಾಗದ ಠಾಣೆಗೆ ಉಪ ಪೊಲೀಸ್ ಆಯುಕ್ತರಾಗಿ ವರ್ಗಾವಣೆಗೊಂಡಿದ್ದಾರೆ.
ಅವರ ಸ್ಥಾನಕ್ಕೆ ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಶಿವಪ್ರಕಾಶ್ ರಾಜೇಂದ್ರ ನಾಯಕ್ ಅವರು ಹುಬ್ಬಳ್ಳಿಯ ಉತ್ತರ ವಿಭಾಗದ ನೂತನ ಉಪ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
ಹುಬ್ಬಳ್ಳಿಯ ನವನಗರ ಎಪಿಎಂಸಿಯ ಠಾಣೆಯ ನೂತನ ಇನ್ಸ್ಪೆಕ್ಟರ್ ಆಗಿ ಸಮೀವುಲ್ಲಾ ಕೆ. ಅವರು ನೇಮಕಗೊಂಡಿದ್ದು, ಮುಂಚೆ ಅವರು ಚಿತ್ರದುರ್ಗ ಜಿಲ್ಲೆಯ ತಳುಕು ವೃತ್ತದ ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು. ಈ ಮುಂಚೆ ಇಲ್ಲಿನ ಇನ್ಸ್ಪೆಕ್ಟರ್ ಆಗಿದೆ ಕಾರ್ಯನಿರ್ವಾಹಿಸಿದ್ದ ಮಂಟೂರ ಅವರ ವರ್ಗಾವಣೆ ಕುರಿತು ಮಾಹಿತಿ ತಿಳಿದು ಬರಬೇಕಿದೆ.

ಹುಬ್ಬಳ್ಳಿ ಕೇಶ್ವಾಪೂರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಉಳಿವೆಪ್ಪ ಹೆಚ್. ಸಾತೇನಹಳ್ಳಿ ಅವರು ಕಾರವಾರ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಇನ್ನೂ ಹುಬ್ಬಳ್ಳಿ ಅರಣ್ಯ ಘಟಕದ ಸಿಐಡಿ ಮುತ್ತಣ್ಣಾ ಸರವಗೋಳ ಅವರು ಕೊಪ್ಪಳದ ಉಪ ವಿಭಾಗಕ್ಕೆ ವರ್ಗಾವಣೆಗೊಂಡಿದ್ದಾರೆ.