ಹುಬ್ಬಳ್ಳಿ : ನಗರದ ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯ ಮುಂಭಾಗದಲ್ಲಿ ಯುವಕನೊಬ್ಬನ ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ಕುರಿತಂತೆ ಹಳೇಹುಬ್ಬಳ್ಳಿ ಠಾಣೆಯ ಪೋಲಿಸರು ಮೃತನ ಗುರುತು ಪತ್ತೆಮಾಡಿದ್ದು, ಮೃತನು ವಿಜಯ ಬಸವಾ ಎಂದು ತಿಳಿಸಿದ್ದಾರೆ.
ಈತ ಹೆಗ್ಗೇರಿ ಮಾರುತಿನಗರದ ನಿವಾಸಿಯಾಗಿದ್ದು, ವಡೋಫೋನ್ ಟಿ.ಎಲ್ ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನು ಮಂಗಳವಾರ ತಡರಾತ್ರಿ ನಡೆದಿರುವ ಘಟನೆಯ ಹಿನ್ನೆಲೆ ನೋಡಿದಾಗ ಕಾಂಗ್ರೆಸ್ ಪಕ್ಷದ ಕಚೇರಿಯ ಮುಂಭಾಗದಲ್ಲಿರುವ ರೈಲ್ವೇ ಜಾಗದಲ್ಲಿ ಪಾರ್ಟಿ ಮಾಡಲು ಬಂದಿದ್ದ ಸ್ನೇಹಿತರ ನಡುವೆ ಜಗಳ ಬೆಳೆದು ಈ ಕೃತ್ಯ ನಡೆದಿರುವ ಅನುಮಾನವನ್ನು ಪೋಲಿಸರು ವ್ಯಕ್ತಪಡಿಸಿದ್ದಾರೆ. ಇನ್ನೂ ಘಟನಾ ಮಾಹಿತಿ ತಿಳಿಯುತ್ತಿದ್ದ ಹಾಗೇ ಸ್ಥಳದಲ್ಲಿ ಬಿಡು ಬಿಟ್ಟಿರುವ ಹಳೇಹುಬ್ಬಳ್ಳಿ ಠಾಣೆಯ ಪೋಲಿಸರು ಘಟನೆಗೆ ನಿಖರವಾದ ಕಾರಣವೇನು? ಎಂಬುದನ್ನು ತನಿಖೆ ಕೈಗೊಂಡಿದ್ದಾರೆ.