ಹುಬ್ಬಳ್ಳಿ: ಪ್ರತಿಷ್ಠಿತ ಉದ್ಯಮಿಯೊಬ್ಬರ ಮನೆಯಲ್ಲಿ ಸೆಕ್ಯುರಿಟಿ ಗಾರ್ಡ್’ನನ್ನು ಥಳಿಸಿ ಮನೆಯನ್ನು ದಕಾಯಿತಿ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಗಳೆಯ ದೂರದಲ್ಲಿರುವ ಮಹೇಂದ್ರ ಶೋರೂಂ ಉದ್ಯಮಿ ಸಚಿನ್ ಸೂತಾರಿಯಾ ಎಂಬಾತರ ಮನೆಯೇ ಕಳ್ಳತನ ಮಾಡಲಾಗಿದೆ.
ಶನಿವಾರ ಮನೆಯಲ್ಲಿದ್ದ ವಯಸ್ಸಾದ ಅಜ್ಜ, ಅಜ್ಜಿ ಹಾಗೂ ಮೊಮ್ಮಗ ಊಟ ಮುಗಿಸಿ ಮನೆಯ ಮೇಲಿನ ಮತ್ತೊಂದು ರೂಮ್’ನಲ್ಲಿ ಮಲಗಿದ್ದರು.ಇದನ್ನು ಹೊಂಚು ಹಾಕಿದ್ದ ಖದೀಮರು, ರಾತ್ರೋರಾತ್ರಿ ಮನೆಗೆ ನುಗ್ಗಿ ಸೆಕ್ಯೂರಿಟಿ ಗಾರ್ಡ್’ನನ್ನು ಥಳಿಸಿ, ಕಟ್ಟಿ ಹಾಕಿ ಕೆಳಗಿನ ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳನ್ನು ಕದ್ದು ಎಸ್ಕೇಪ್ ಆಗಿದ್ದಾರೆ.
ಇನ್ನೂ ಸೆಕ್ಯೂರಿಟಿಯನ್ನು ಮನೆಯ ಹಿಂದಿನ ಮೈದಾನದಲ್ಲಿ ಎಸೆದು ಹೋಗಿದ್ದಾರೆ. ಬೆಳಿಗ್ಗೆ ಘಟನೆ ಬೆಳೆಕಿಗೆ ಬಂದಿದ್ದು, ಕೂಡಲೇ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿಸಿಪಿ ನಂದಗಾವಿ ಹಾಗೂ ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.