ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಅಯ್ಯಪ್ಪ ಮಾಲಾಧಾರಿ ಮೇಲೆ ಯುವಕರ ಗುಂಪೊಂದು ಮನಬಂದಂತೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾರೂಢಮಠದ ಹತ್ತಿರದ ಪಾನ ಶಾಪ್ ಅಂಗಡಿ ನಡೆಸುತ್ತಿದ್ದ ಸಚಿನ್ ಶೆಟ್ಟಿ ಎಂಬಾತರ ಮೇಲೆಯೇ ಹಲ್ಲೆ ಮಾಡಲಾಗಿದೆ.
ಸ್ಥಳೀಯ ಯುವಕರ ಗುಂಪೊಂದು ಪಾನಶಾಫ್ ನಲ್ಲಿ ಉದ್ರಿ ಮಾಡಿದ್ದಾರೆ. ಈ ಉದ್ರಿ ಹಣವನ್ನು ಕೊಡುವುದಾಗಿ ಇಂದು ಅಯ್ಯಪ್ಪ ಮಾಲಾಧಾರಿ ಸಚಿನ್ ನನ್ನು ದೇವರಗುಡಿಹಾಳ ರಸ್ತೆಗೆ ಕರಿಸಿಕೊಂಡು “ನಮಗ ಉದ್ರಿ ಕೇಳ್ತಿಯೇನೋಲೆ” ಅಂತ ಮನಬಂದಂತೆ ಹಿಗ್ಗಾ-ಮುಗ್ಗಾ ಥಳಿಸಿದ್ದಾರೆ.

ಅಷ್ಟೇ ಅಲ್ಲದೇ ಚಾಕು ತೆಗೆದು ಚುಚ್ಚಲು ಮುಂದಾದ ಪುಡಿ ರೌಡಿಗಳು, ಸದ್ಯ ದುಷ್ಕರ್ಮಿಗಳಿಂದ ಬಚಾವ್ ಆಗಿ ತಪ್ಪಿಸಿಕೊಂಡು ಬಂದಿರುವ ಅಯ್ಯಪ್ಪ ಮಾಲಾಧಾರಿ ಸಚಿನ್ ಶೆಟ್ಟಿ ಗಂಭೀರವಾಗಿ ಗಾಯಗೊಂಡಿದ್ದು ಗೆಳೆಯರ ಸಹಾಯದಿಂದ ಕಿಮ್ಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ವರೆಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತರ ಕಾರ್ಯಾಚರಣೆಯಿಂದ ಭಯಭೀತಿ ಹೊಂದಿದ್ದ ಪುಂಡಪೋಕರಿಗಳಿಗೆ ಇದೀಗ ಎಲ್ಲೋ ಒಂದು ಕಡೆ ಪೋಲಿಸ್ ಆಯುಕ್ತರ ಭಯವೇ ಕಮ್ಮಿಯಾಗಿದೆಯ ಅನ್ನೋ ಗುಸು ಗುಸು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಹೀಗಾಗಿ ಎಲ್ಲೆಂದರಲ್ಲಿ ಮತ್ತೆ ಬಾಲ ಬಿಚ್ಚುತ್ತಿರುವ ಇಂತಹ ಪುಡಿ ರೌಡಿಗಳಿಗೆ ಪೊಲೀಸ್ ಇಲಾಖೆ ಮತ್ತಷ್ಟು ಬಿಸಿ ಮುಟ್ಟಿಸುವ ಅವಶ್ಯಕತೆ ಇದೆ.