ಹುಬ್ಬಳ್ಳಿ : ಬೈಕ್ ಅಪಘಾತಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ಬೈರೀದೇವರಕೊಪ್ಪ ದರ್ಗಾ ಬಳಿ ಈಗಷ್ಟೇ ನಡೆದಿದೆ.
ಮೃತ ಯುವಕನೂ ಧಾರವಾಡ ಕಡೆಯಿಂದ ಹುಬ್ಬಳ್ಳಿ ಕಡೆಗೆ ಹೋಗುತ್ತಿರುವಾಗ ಬೈಕ್ ಸಂಖ್ಯೆ KA28HE8233 ಸ್ಕಿಡ್ ಆಗಿ, ಯುವಕನ ತಲೆಗೆ ಬಲವಾದ ಏಟು ಬಿದ್ದು ರಕ್ತಸ್ರಾವವಾಗಿ, ಸ್ಥಳದಲ್ಲೇ ಮೃತ ಪಟ್ಟಿದ್ದಾನೆ.

ಮೃತ ಯುವಕ ಯಾರೆಂಬ ಮಾಹಿತಿ ಲಭ್ಯವಾಗಿಲ್ಲ. ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆಯ ಪೊಲೀಸರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.