ಹುಬ್ಬಳ್ಳಿ: ಟಿಬೆಟಿಯನ್ ಓರ್ವರು ಆಟೋದಲ್ಲಿ ಮರೆತು ಹೋಗಿದ್ದ ಸುಮಾರು 1 ಲಕ್ಷ 50 ಸಾವಿರ ರೂ. ಮೌಲ್ಯದ ವಸ್ತುಗಳನ್ನು ಹುದುಕಿ ಮರಳಿ ವಾರಸುದಾರರಿಗೆ ನೀಡುವ ಪ್ರಾಮಾಣಿಕ ಕಾರ್ಯವನ್ನು ಶಹರ ಠಾಣೆಯ ಪೊಲೀಸರು ಮಾಡಿದ್ದಾರೆ.

ಡಿ.29 ರಂದು ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಿಂದ ರೈಲ್ವೆ ಸ್ಟೇಷನ್ ಗೆ ಹೋಗುವ ಸಂದರ್ಭದಲ್ಲಿ ಟಿಬೆಟಿಯನ್ ಲಾಮಾಗಳಾದ ಲಬ್ಸಾಂಗ್ ಎಂಬುವವರು ಒಂದು ಐಪ್ಯಾಡ್ ಏರ್ ಮತ್ತು ಐಫೋನ್ ಹಾಗೂ 12000 ರೂ. ಒಟ್ಟು ಅಂದಾಜು 1 ಲಕ್ಷ 50 ಸಾವಿರ ರೂ. ಬೆಲೆಬಾಳುವ ವಸ್ತುಗಳನ್ನು ಮರೆತು ಹೋಗಿದ್ದರು.
ಪಿಐ ಮತ್ತು ಪಿಎಸ್ಐ ಅವರ ಮಾರ್ಗದರ್ಶನದಲ್ಲಿ ಅಪರಾಧ ಸಿಬ್ಬಂದಿಗಳಾದ ರವಿರಾಜ್ ಕೆಂದೂರ ಮತ್ತು ರುದ್ರಪ್ಪ ಹೊರಟ್ಟಿ ಅವರು ತಕ್ಷಣ ಕಾರ್ಯಪ್ರವೃತ್ತರಾಗಿ ಆಟೋವನ್ನು ಹುಡುಕಿ ಟಿಬೆಟಿಯನ್ ಮಾಲಾಗಳಿಗೆ ವಸ್ತುಗಳನ್ನು ಹಿಂದುರುಗಿಸಿದ್ದಾರೆ. ಪೊಲೀಸರು ಕಾರ್ಯಕ್ಕೆ ಸಾರ್ವಜನಿಕರು ಹಾಗೂ ಕಮೀಷನರೇಟ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.