ಹುಬ್ಬಳ್ಳಿ: ನವಜಾತ ಶಿಶುವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಎಸೆದು ಹೋಗಿರುವ ಅಮಾನವೀಯ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಪಾಟೀಲ್ ಗಲ್ಲಿನ ಪಾಟೀಲ್ ಗಲ್ಲಿಯ ಹತ್ತಿರದ ಏಳು ಮಕ್ಕಳ ತಾಯಿ ಗುಡಿ ಹತ್ತಿರ ಯಾರೋ ಶಿಶುವನ್ನು ಬಿಸಾಡಿ ಹೋಗಿದ್ದು, ಪೌರಕಾರ್ಮಿಕರು ಕಸ ಗೂಡಿಸುವಾಗ ಹಾಗೂ ಬೆಳಿಗ್ಗೆ ಸಂಚಾರಿ ಪೊಲೀಸರು ಕರ್ತವ್ಯಕ್ಕೆ ಹೋದ ಸಂದರ್ಭದಲ್ಲಿ ನವಜಾತ ಗಂಡು ಶಿಶುವನ್ನು ನೋಡಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಎಎಸ್ಐ ಕುಸುಗಲ್ ಅವರ ಮಾಹಿತಿ ಆಧರಿಸಿ ಸ್ಥಳಕ್ಕೆ ಬೆಂಡಿಗೇರಿ ಠಾಣೆಯ ಪೊಲೀಸರುಆಗಮಿಸಿದ್ದು, ನವಜಾತ ಶಿಶುವನ್ನು ಬೀದಿಬದಿಯಲ್ಲಿ ಬಿಸಾಡಿ ಹೋದ ಪಾಪಿ ತಂದೆ-ತಾಯಿ ಯಾರು ಎಂಬುದನ್ನು ಪೊಲೀಸರು ತನಿಖೆ ನಡೆಸಬೇಕಿದೆ.