ಹುಬ್ಬಳ್ಳಿ: ತಾಲೂಕಿನ ಕುಸುಗಲ್ ಗ್ರಾಮದಲ್ಲಿ ನಡೆದಿದ್ದ ತಂದೆ ಹಾಗೂ ಮಲತಾಯಿಯ ಬರ್ಬರವಾಗಿ ಹತ್ಯೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು 24 ಘಂಟೆಯಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ತಂದೆ ಅಶೋಕ ಹಾಗೂ ಮಲತಾಯಿ ಶಾರದಮ್ಮಳನ್ನು ಮನೆಯಲ್ಲಿಯೇ ಆಸ್ತಿ ವಿಚಾರಕ್ಕೆ ಕೊಲೆ ಮಾಡಿ, ಮಗ ಗಂಗಾಧರ್ ಪರಾರಿಯಾಗಿದ್ದ.

ಇಂದು ಬೆಳಿಗ್ಗೆ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ಮುರಗೇಶ್ ಚೆನ್ನಣ್ಣವರ ನೇತೃತ್ವದ ತಂಡ ಆರೋಪಿ ಗಂಗಾಧರ್ ನನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದೆ.
ಸದ್ಯ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ.