ಹುಬ್ಬಳ್ಳಿ: ಪ್ರೀತಿಸುವ ನೆಪ ಹಾಗೂ ಹಣದ ಆಸೆ ತೋರಿಸುವ ಮೂಲಕ ಯುವತಿಯರೊಂದಿಗೆ ರಾಸಲೀಲೆ ಆಡಿ, ವಿಡಿಯೋ ಸೆರೆ ಹಿಡಿದು, ಬೆದರಿಕೆ ಹಾಕುತ್ತಿದ್ದ ವಿಕೃತ ಕಾಮಿಯನ್ನು ಕಸಬಾಪೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯ ಶರಾವತಿನಗರದ ಕೆಇಬಿ ಲೇಔಟ್ ನಿವಾಸಿ ಹಾಗೂ ಝರಾಕ್ಸ್ ಅಂಗಡಿ ಮಾಲೀಕ ಅಶ್ಪಾಕ್ ಜೋಗನ್ ಕೊಪ್ಪ (38) ಎಂಬಾತನೇ ಬಂಧಿತ ಆರೋಪಿ. ಈತ ಹುಬ್ಬಳ್ಳಿಯ ಟಿಪ್ಪು ನಗರದಲ್ಲಿ ಝರಾಕ್ಸ್ ಮತ್ತು ಮೊಬೈಲ್ ರೀಚಾರ್ಜ್ ಸ್ಟೋರ್ ಇಟ್ಟುಕೊಂಡಿದ್ದಾನೆ. ಅಂಗಡಿಗೆ ಬರುವ ಬಡ ಯುವತಿಯರು ಸೇರಿದಂತೆ ಅಪ್ರಾಪ್ತ ಹೆಣ್ಣುಮಕ್ಕಳನ್ನು ಹಣದ ಆಸೆ ತೋರಿಸಿ, ಪುಸಲಾಯಿಸಿ ಕಾಮದಾಟಕ್ಕೆ ಬಳಸಿಕೊಳ್ಳುತ್ತಿದ್ದ. ಅಷ್ಟೇ ಅಲ್ಲದೆ ವಿಡಿಯೋ ಕಾಲ್ ನಲ್ಲಿ ಹೆಣ್ಣು ಮಕ್ಕಳ ಬಟ್ಟೆ ಬಿಚ್ಚಿಸಿ, ನಗ್ನ ಚಿತ್ರ ರೆಕಾರ್ಡ್ ಮಾಡಿಕೊಳ್ಳುತ್ತಿದ್ದನಂತೆ.
ಅಪ್ರಾಪ್ತ ಬಾಲಕಿಯ ಪೋಷಕರ ದೂರಿನ ಮೇರೆಗೆ ಝರಾಕ್ಸ್ ಅಂಗಡಿ ಮಾಲೀಕನನ್ನ ಕಸಬಾಪೇಟ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಅವರ ನೇತೃತ್ವದ ತಂಡ ಠಾಣೆಗೆ ಕರೆತಂದು ಡ್ರಿಲ್ ಮಾಡಿ ವಿಚಾರಣೆ ನಡೆಸಿದೆ. ಈ ವೇಳೆ ಸೈಕೋ ಕಾಮಿ ಮೊಬೈಲ್ನಲ್ಲಿ ಪೊಲೀಸರಿಗೆ ಹತ್ತಕ್ಕೂ ಹೆಚ್ಚು ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋಗಳು ಸಿಕ್ಕಿವೆ.

ಸದ್ಯ ಕಸಬಾಪೇಟ್ ಪೊಲೀಸರ ಹೆಚ್ಚಿನ ವಿಚಾರಣೆಯಿಂದ ಝರಾಕ್ಸ್ ಅಂಗಡಿ ಮಾಲೀಕನ ಅಸಲಿ ಮುಖ ಹೊರ ಬಿದ್ದಿದ್ದು, ಅದೆಷ್ಟೋ ಬಡ ಹೆಣ್ಣು ಮಕ್ಕಳ ಜೀವ ಉಳಿದಂತಾಗಿದೆ.
ಸದ್ಯ ವಿಕೃತ ಸೈಕೋ ಕಾಮಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.