ಹುಬ್ಬಳ್ಳಿ: ಮೀಟರ್ ಬಡ್ಡಿ ಕಿರುಕುಳಕ್ಕೆ ವ್ಯಕ್ತಿಯೋರ್ವ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಹುಬ್ಬಳ್ಳಿಯ ದಾರಾವತಿ ಹನುಮಂತ ದೇವಸ್ಥಾನದ ಬಳಿ ನಡೆದಿದೆ.

ನಗರದ ಉಣಕಲ್ ದುರ್ಗಮ್ಮನ ಓಣಿ ನಿವಾಸಿ ಸಿದ್ಧಪ್ಪ ಕೆಂಚಣ್ಣವರ(42) ಮೃತ ದುರ್ದೈವಿ. ಮೃತ ವ್ಯಕ್ತಿಯು ಮಹೇಶ್ ಚಿಕ್ಕವೀರಮಠ್ ಎಂಬ ವ್ಯಕ್ತಿಯ ಬಳಿ 10 ಲಕ್ಷ ರೂಪಾಯಿ ಸಾಲವನ್ನು ತೆಗೆದುಕೊಂಡಿದ್ದ, ತಗೊಂಡ ಸಾಲಕ್ಕೆ 65 ಲಕ್ಷ ಬಡ್ಡಿ ತುಂಬಿರುವುದಾಗಿ ಡೆತ್ ನೋಟ್ ನಲ್ಲಿ ಬರೆದಿಟ್ಟು ಬೈಕ್ ಚಲಾಯಿಸುತ್ತಲೇ ಟ್ರಕ್ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇನ್ನು ತನ್ನ ಸಹೋದರನ ಸಾವಿಗೆ ನ್ಯಾಯ ಬೇಕೆಂದು ಮೃತನ ಕುಟುಂಬಸ್ಥರು ಹಾಗೂ ಮೃತನ ಗೆಳೆಯರು ಗೋಕುಲ್ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಅಂಗಾಲಚುತಿದ್ದಾರೆ.

ಗೋಕುಲ್ ಪೋಲಿಸ್ ಠಾಣೆಗೆ ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತರು ಬೇಟಿ ನೀಡಿ ಮೃತನ ಕುಟುಂಬಸ್ಥರಿಗೆ ದೈರ್ಯ ತುಂಬುವ ಮೂಲಕ ಆರೋಪಿಗೆ ತಕ್ಕ ಶಿಕ್ಷೆ ಕೊಡುವುದಾಗಿ ಭರವಸೆ ನೀಡಿದ್ದಾರೆ.

ಸದ್ಯ ಗೋಕುಲ್ ರೋಡ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮಹೇಶ್ ಚಿಕ್ಕವೀರಮಠ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

