ಹುಬ್ಬಳ್ಳಿ:ಜಾಗ ಒತ್ತುವರಿ ಪ್ರಶ್ನೆ ಮಾಡಿದ್ದಕ್ಕೆ ಹಾಡಹಗಲೇ ಮನೆಗೆ ನುಗ್ಗಿ ಇಡೀ ಕುಟುಂಬವನ್ನೆ ಪುಡಿ ರೌಡಿಗಳು ಹಿಗ್ಗಾ ಮುಗ್ಗಾ ಥಳಿಸಿದ ಘಟನೆ ಹುಬ್ಬಳ್ಳಿಯ ಕೌವಲ್ ಪೇಟ್, ಮೋಮಿನ್ ಪ್ಲಾಟ್ ಆಸಾಮಿ ಕಾಲೋನಿಯಲ್ಲಿ ನಡೆದಿದೆ.
https://www.instagram.com/reel/DFHsPltSnC7/?igsh=MWkxcGtvYXByNW1wYQ==
ಮಹಮ್ಮದ್ ಶಾಹಿದ್ ಅದೋನಿ, ತಾಹೇರಾ ಬಾನು, ನಜೀರ್ ಅಹ್ಮದ್ ಎನ್ನುವರ ಮೇಲೆ ಸಾದೀಕ್ ಪಾನ್ ಶಾಪ್ ಮತ್ತು ಕರೋಲಿ ಹಾಗೂ ಪುಡಾರಿ ಲೀಡರ್ ಮೊಹಮ್ಮದ್ ಗೌಸ್ ತಂಡದಿಂದ ಹಲ್ಲೆ ಮಾಡಲಾಗಿದೆ.
ಮಹಮ್ಮದ್ ಶಾಹಿದ್ ಅದೋನಿ ಮನೆ ಪಕ್ಕದ ಖಾಲಿ ನಿವೇಶನಕ್ಕೆ ಅಂಟಿಕೊಂಡಿರುವ ಸರ್ಕಾರಿ ರಸ್ತೆಯನ್ನು ಸಾಧೀಕ್ ಒತ್ತುವರಿ ಮಾಡಿಕೊಂಡಿದ್ದ ಇದು ತಪ್ಪು ಎಂದು ಬುದ್ದಿವಾದ ಹೇಳಲು ಮುಂದಾಗಿದ್ದ ಮಹಮ್ಮದ್ ಕುಟುಂಬಸ್ಥರ ಮೇಲೆ ಕೋಪಗೊಂಡು ಗುಂಪು ಕಟ್ಟಿಕೊಂಡು ಸಾಧಿಕ್ ಹಾಗೂ ಸಹಚರರು ಥಳಿಸಿದ್ದಾರೆ.

ಘಟನೆ ಕುರಿತಂತೆ ಕಮರಿಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.