ಹುಬ್ಬಳ್ಳಿ: ನೀರಿನ ಟ್ಯಾಂಕ್ ನಲ್ಲಿ ಮಗುವೊಂದು ಬಿದ್ದು ಸಾವನ್ನಪ್ಪಿದ ಮನಕುಲಕುವ ಘಟನೆ ನಗರದ ಗಾಮನಗಟ್ಟಿ ಗ್ರಾಮದಲ್ಲಿ ನಡೆದಿದೆ.
ತಾಲುಕಿನ ಬುಡರಸಿಂಗಿ ನಿವಾಸಿ ಭೀಮಪ್ಪ ಜಿಗಳೂರು ಅವರ 2 ವರ್ಷದ ದೀಪಾ ಅಸುನೀಗಿದೆ ಮಗು. ರಜೆಗೆಂದು ಗಾಮನಗಟ್ಟಿಯಲ್ಲಿ ವಾಸವಿರುವ ಮಗುವಿನ ಅಜ್ಜನಾದ ಸಿದ್ದಪ್ಪ ಕರಡಿಗುಡ್ಡ ಮನೆಗೆ ಬಂದ ಸಂದರ್ಭದಲ್ಲಿ ಈ ಒಂದು ಅವಘಡ ಸಂಭವಿಸಿದೆ.

ಆಟವಾಡುವ ಸಂದರ್ಭದಲ್ಲಿ ಮನೆಯ ಮುಂಬಾಗದಲ್ಲಿ ಇರುವ ನೀರಿನ ಟ್ಯಾಂಕ್ ನಲ್ಲಿ ಬಿದ್ದು ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ. ಮೃತ ಮಗುವನ್ನು ಕಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ನವನಗರ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.