ಹುಬ್ಬಳ್ಳಿ: ನಗರದಲ್ಲಿ ನಿನ್ನೆ ಆಟೋ ನಿಲ್ಲಿಸಿದ ವಿಚಾರಕ್ಕೆ ಅಂಗಡಿಯ ಸಿಬ್ಬಂದಿಗಳಿಗೆ ಮನಸೋಇಚ್ಛೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ಶಹರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಅಂಗಡಿ ಮುಂಭಾಗದಲ್ಲಿ ಆಟೋ ನಿಲ್ಲಿಸಬೇಡ ಟ್ರಾಫಿಕ್ ಜಾಮ್ ಆಗುತ್ತೆ ಅಂತ ಸ್ತುತಿ ಸೀಟ್ ಅಂಗಡಿಯಲ್ಲಿ ಕೆಲಸ ಮಾಡುತಿದ್ದ ಯುವಕನೋರ್ವ ಆಟೋ ಡ್ರೈವರ್ ಅಶ್ರಫ್ ಖಾನ್ ಎಂಬುವವನಿಗೆ ಹೇಳಿದ್ದಾನೆ. ಇದೆ ಮಾತಿಗೆ ಅವರ ಮಧ್ಯೆ ಜಗಳವಾಗಿದೆ. ಅಷ್ಟಕ್ಕೇ ಸುಮ್ಮನಾಗದ ಆಟೊ ಡ್ರೈವರ್ ತನ್ನ ತಮ್ಮನಾದ ರಸೂಲ್ ಖಾನ್ ಉರ್ಫ್ ಕಾಲಾ ರಸೂಲ್ ಹಾಗೂ ಅಸ್ಲಾಂ ಬೆಪಾರಿಯನ್ನು ಕರೆಸಿಕೊಂಡು ಸೀಟ್ ಅಂಗಡಿಯಲ್ಲಿದ್ದ ಸುಮಂತ್ ಜಮಖಂಡಿ, ಡೇವಿಡ್ ಜಮಖಂಡಿ ಹಾಗೂ ಅಭಿ ಗಾಮನಗಟ್ಟಿ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಗಾಯಗೊಂಡ ಯುವಕರು ಶರಹ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಶಹರ ಠಾಣೆಯ ಪೋಲಿಸ್ ಇನ್ಸ್ಪೆಕ್ಟರ್ ರಫೀಕ್ ತಹಶೀಲ್ದಾರ್ ನೇತೃತ್ವದ ತಂಡ ಹಲ್ಲೆ ಮಾಡಿದ ಆರೋಪಿಗಳನ್ನು ಕೆಲವೇ ಘಂಟೆಗಳಲ್ಲಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಏನೇ ಆಗಲಿ ಅವಳಿನಗರದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಮಿಷನರೇಟ್ ಎಷ್ಟೇ ಜಾಗೃತಿ ಮೂಡಿಸಿದರೂ ಕೂಡ ಇಂತಹ ಅಪರಾಧ ಪ್ರಕರಣಗಳು ಕ್ಷುಲಕ ವಿಚಾರಕ್ಕೆ ಪದೇ ಪದೇ ನಡೆಯುತ್ತಿರೋದು ಪೋಲಿಸ್ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಇನ್ನಾದರೂ ಇಂತಹ ಪುಡಿ ರೌಡಿಗಳ ಹೆಡೆಮುರಿ ಕಟ್ಟುವ ಬದಲು ಇಂತವರನ್ನ ಸಾಕಿ ಸಲಹುವ ಹಾಗೂ ಮಾನಿಟರಿಂಗ್ ಮಾಡುವ ರೌಡಿಗಳಿಗೆ ಪೋಲಿಸ್ ಇಲಾಖೆ ಬಿಸಿ ಮುಟ್ಟಿಸುವ ಕೆಲಸ ಮಾಡಬೇಕಿದೆ ಅನ್ನೋ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.