ಧಾರವಾಡ: ಹಾಡಹಗಲೇ ವೃದ್ಧ ದಂಪತಿಗಳ ಮೇಲೆ ಹಲ್ಲೆ ಮಾಡಿ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಮಾಳಮಡ್ಡಿ ನಿವಾಸಿ ಡಾಕ್ಟರ್ ಆನಂದ್ ಕಬ್ಬೂರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕಳ್ಳರು ಏಕಾಏಕಿ ಮನೆಗೆ ನುಗ್ಗಿ ವೃದ್ಧ ದಂಪತಿಗಳ ಮೇಲೆ ಮಾರಣಾಂತಿಕ ಹಲ್ಲೆ ಮಾಡುವ ಮೂಲಕ ಕೊರಳಲ್ಲಿದ್ದ ಮಾಂಗಲ್ಯ ಸರ ಹಾಗೂ ಮನೆಯಲ್ಲಿದ್ದ ನಗದು ದೋಚಿ ಪಾರರಿಯಾಗಿದ್ದರು.

ಮನೆಯಲ್ಲಿ ಅಳವಡಿಸಿದ ಸಿಸಿಟಿವಿ ಕ್ಯಾಮರಾದ ಡಿವಿಆರ್ ಸಹ ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರು ಬೇಟಿ ನೀಡಿ, ಇನ್ಸ್ಪೆಕ್ಟರ್ ಸಂಗಮೇಶ್ ದಿಡಿನಾಳ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚನೆ ಮಾಡಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಆರೋಪಿಗಳ ಬೆನ್ನಟ್ಟಿದ ಪೊಲೀಸರು ಆಟೋದಲ್ಲಿ ಹೋಗುತಿದ್ದ ಸಂದರ್ಭದಲ್ಲಿ ಅವರನ್ನು ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಬಂಧಿತರನ್ನು ಹಾವೇರಿಪೇಟ್ ನಿವಾಸಿ ಅಶೋಕ್ ಹೊಸಮನಿ, ಧಾರವಾಡ ನಗರದ ಕಮಲಾಪುರ ಹೂಗಾರ್ ಓಣಿ ನಿವಾಸಿ ಶಿವಕುಮಾರ್ ಕೊಕಾಟಿ ಹಾಗೂ ಧಾರವಾಡ ಹೊಸಯಲ್ಲಾಪುರ ನಿವಾಸಿ ಶಿವಾನಂದ್ ಕರಡಿಗುಡ್ಡ ಎಂದು ತಿಳಿದುಬಂದಿದೆ. ಬಂಧಿತರಿಂದ 30 ಗ್ರಾಂ ಬಂಗಾರದ ಮಂಗಳಸೂತ್ರ, 03 ಮೋಟಾರ್ ಸೈಕಲ್, ಎರೆಡು ಮೊಬೈಲ್ ಹಾಗೂ ಒಂದು ಆಟೋ ರಿಕ್ಷಾ ಸೇರಿ ಒಟ್ಟು 3,95,000 ಕಿಮ್ಮತ್ತಿನ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನು ಆರೋಪಿಗಳನ್ನು ವಶಕ್ಕೆ ಪಡೆದ ವಿದ್ಯಾಗಿರಿ ಪೋಲಿಸ್ ಇನ್ಸ್ಪೆಕ್ಟರ್ ಸಂಗಮೇಶ್ ದಿಡಿನಾಳ್, ಪಿಎಸ್ಐಗಳಾದ ಪ್ರಮೋದ್. ಎಚ್.ಜಿ, ಬಾಬಾ ಎಂ, ಎಂ.ಆರ್ ಮಲ್ಲಗವಾಡ, ಎಎಸ್ಐ ಐ.ಐ. ಮದರಖಂಡಿ, ಜಿ.ಜಿ. ಚಿಕ್ಕಮಠ, ಬಾಬು. ಧುಮಾಳ, ಕೆ.ಎಂ. ಡೊಕ್ಕಣ್ಣವರ, ಎಂ.ಸಿ. ಮಂಕಣಿ, ಆನಂದ ಬಡಿಗೇರ, ಲಕ್ಷ್ಮಣ ಲಮಾಣಿ, ಸಾಗರ ಕುಂಕುಮಗಾರ ಹಾಗೂ ಮೌನೇಶ ಚವ್ಹಾಣ ಇವರುಗಳ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ಕಂಪ್ಲೀಟ್ ಆಕ್ಟಿವ್ & ಅಲರ್ಟ್ ಆಗಿದ್ದು, ಅಪರಾಧ ಪ್ರಕರಣಗಳನ್ನು ತಡೆಗಟ್ಟಲು ಹಗಲಿರುಳು ಶ್ರಮಿಸುವ ಮೂಲಕ ಅಪರಾಧ ಪ್ರಕರಣಗಳು ನಡೆಯದಂತೆ ಮುಂಜಾಗೃತ ಕ್ರಮಗಳನ್ನು ವಹಿಸಿಕೊಂಡಿದ್ದಾರೆ, ಬಟ್ ಎಲ್ಲೋ ಒಂದು ಕಡೆ ಅಪರಾಧ ಪ್ರಕರಣಗಳು ಯಾಕೆ ಕಂಟ್ರೋಲ್ ಆಗುತ್ತಿಲ್ಲ ಅನ್ನೋದು ಕೂಡ ಯಕ್ಷ ಪ್ರಶ್ನೆಯಾಗಿದೆ..