ಹುಬ್ಬಳ್ಳಿ: ಕೆಲ ದಿನಗಳ ಹಿಂದೆ ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತ ಮಹಿಳೆಯೋರ್ವಳು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೇ ಮೂವರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ನಗರದ ಗಣೇಶ್ ನಿವಾಸಿ ಕೌಸರ್ ಚೌದರಿಯು ನಗರದ ಬ್ಯಾಳಿ ಪ್ಲಾಟ್ ನಿವಾಸಿ ಸಾಧಿಕ್ ಬಟನವಾಲೆ ಎಂಬಾತನ ಜೊತೆ ವಿವಾಹವಾಗಿದ್ದಳು. ಈ ದಂಪತಿಗಳಿಗೆ ಮೂವರು ಮಕ್ಕಳಿದ್ದಾರೆ. ಆದರೆ ಸಾಧಿಕ್ ತಾಯಿ ಹಾಗೂ ಮೂವರು ಸಹೋದರಿಯರಿಂದ ನಿತ್ಯ ಕಿರುಕುಳಕ್ಕೆ ಕೌಸರ್ ಒಳಗಾಗಿದ್ದಳು.

ಇತ್ತ ಕಿರುಕುಳ ಬೇಸತ್ತಿದ್ದ ಕೌಸರ್ ತವರು ಮನೆಯಲ್ಲಿ ವಾಸವಿದ್ದಳು ಆಕೆಯ ಗಂಡ ಗೋವಾದಲ್ಲಿ ಕೆಲಸ ಮಾಡುತ್ತಿದ್ದ ಅಲ್ಲಿಂದ ಹುಬ್ಬಳ್ಳಿಗೆ ಬಂದ ನಂತರ ಕೌಸರ್ ನನ್ನು ತವರು ಮನೆಯಿಂದ ತನ್ನ ಮನೆಗೆ ಕರೆದುಕೊಂಡು ಬಂದಿದ್ದ ಬಂದ ಎರಡೆ ದಿನಕ್ಕೆ ಮತ್ತೆ ಕಿರುಕುಳಕ್ಕೆ ಒಳಗಾಗಿದ್ದಾಳೆ. ಸಾಧಿಕ ಮನೆಗೆ ಬಂದ ವೇಳೆ ಸಾಧಿಕ್ ಕುಟುಂಬಸ್ಥರ ಹಾಗೂ ಕೌಸರ್ ನಡುವಿನ ಜಗಳ ಬಿಡಿಸಿದ್ದಾನೆ.
ನಂತರ ಕಿರುಕುಳ ತಾಳಲಾರದೇ ಮನನೊಂದ ಕೌಸರ್ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಸ್ಪತ್ರೆಗೆ ದಾಖಲಿಸಲಿಸಿದರೂ ಕೂಡಾ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಕೌಸರ್ ಸಾವು ಆತ್ಮಹತ್ಯೆ ಅಲ್ಲ ಇದು ಕೊಲೆ ಎಂದು ಕೌಸರ್ ಕುಟುಂಬಸ್ಥರು ಗಂಭೀರವಾಗಿ ಆರೋಪಿಸಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ದೂರಿನ ಅನ್ವಯವಾಗಿ ಸಾಧಿಕ್ ನನ್ನ ಪೊಲೀಸರು ವಶಕ್ಕೆ ಪಡದುಕೊಂಡು ಸೆರೆಮನೆಗೆ ತಳ್ಳಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಪ್ರಕರಣವನ್ನು ಬೆಂಡಿಗೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಪ್ರಕರಣದ ಜಾಡು ಹಿಡಿದ ಠಾಣೆಯ ಇನ್ಸಯ ಎಸ್. ಆರ್.ನಾಯಕ್ ಮತ್ತು ತಂಡದಲ್ಲಿ ರುಕಿಯಾ ರಾಂಜನಿಯವರ, ಗಾಯತ್ರಿ ಮಾಳದಕರ್, ರಾಮು ಹರಕಿ, ಹನುಮಂತ ಕರಗಾವಿ ಹಾಗೂ ಬಸು ಬೆಳಗಿ ತಂಡ ಮೂರು ಜನ ಆರೋಪಿಗಳಾದ ಸಾಧಿಕ್ ತಾಯಿ ಫರೀದಾ ಬಟನವಾಲೆ ಆಕೆಯ ಹೆಣ್ಣುಮಕ್ಕಳಾದ ರಾಹುತ್ ಟಾಕಿವಾಲೆ ಹಾಗೂ ಫರಹತ್ ಶೇಖ್ ನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.