ಹುಬ್ಬಳ್ಳಿ; ರಾಜ್ಯದಾದ್ಯಂತ ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಾಗಿದ್ದು, ಇದೀಗ ಹುಬ್ಬಳ್ಳಿಯಲ್ಲಿಯೂ ಸಾಲ ಕಟ್ಟುವಂತೆ ಮನೆಗೆ ಬಂದು ಬ್ಯಾಂಕ್ ಸಿಬ್ಬಂದಿ ಒತ್ತಾಯಿಸಿದ ಘಟನೆ ನಡೆದಿದೆ.
ನಗರದ ಅಲ್ತಾಫ್ ನಗರದ 2೦ ಕ್ಕೂ ಹೆಚ್ಚು ಜನರಿಗೆ ಭಾರತ ಫೈನಾನ್ಸ್ ಸಾಲ ನೀಡಿತ್ತು. ಸುಮಾರು ಏಳು ಲಕ್ಷ ರೂ. ಸಾಲವನ್ನು ಭಾರತ ಫೈನಾನ್ಸ್ ನೀಡಿತ್ತು, ಒಂದು ವಾರದ ಹಣ ಪಾವತಿ ಮಾಡದ ಹಿನ್ನಲೆಯಲ್ಲಿ ಮನೆಗೆ ಸಿಬ್ಬಂದಿ ಬಂದು ಹಣ ಕಟ್ಟುವಂತೆ ಒತ್ತಾಯಿಸಿದ್ದಾರೆ.
ಕೆಲ ದಿನಗಳವರೆಗೆ ಅವಕಾಶ ಕೊಡಿ ಎಂದು ವಿನಂತಿಸಿದರೂ ಕೂಡಾ ಕೇಳದ ಫೈನಾನ್ಸ್ ಸಿಬ್ಬಂದಿಗಳು ಮನೆಯಲ್ಲೇ ಎರಡು ತಾಸು ಕುಳಿತು ಹಣ ಕೊಟ್ಟ ಬಳಿಕವೇ ಸಿಬ್ಬಂದಿ ಮನೆಯಿಂದ ಹೊರನಡೆದಿದ್ದಾರೆ.
ಇನ್ನೂ 2೦ ಜನರ ಒಂದು ತಂಡ ಮಾಡಿ ಸಾಲವನ್ನು ಭಾರತ ಫೈನಾನ್ಸ್ ನೀಡಿತ್ತು, ಕೆಲವರಿಗೆ ಸಿಬ್ಬಂದಿ ಹಣ ಕಟ್ಟೋಕೆ ಅವಕಾಶ ನೀಡಿದ್ದಾರೆ.