ಹುಬ್ಬಳ್ಳಿ: ನಗರದಲ್ಲಿ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಟಿಕ ಆಹಾರದ ಪ್ಯಾಕೆಗಳನ್ನ ಅಕ್ರಮವಾಗಿ ದಾಸ್ತಾನು ಮಾಡಿದ ಆರೋಪಿಗಳನ್ನ ಹುಬ್ಬಳ್ಳಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ ಆಯುಕ್ತ ಎನ್ ಶಶಿಕುಮಾರ ಅಕ್ರಮವಾಗಿ ಅಂಗನವಾಡಿಯ ಮಕ್ಕಳಿಗೆ, ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಕೊಡಬೇಕಾದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿಕೊಂಡು ಕಾಳಸಂತೆಯಲ್ಲಿ ಖದೀಮರು ಮಾರಾಟ ಮಾಡುವ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ಖದೀಮರ ಈ ಕಳ್ಳಾಟದ ಖಚಿತ ಮಾಹಿತಿ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮತ್ತು ಧಾರವಾಡ ಸಹಾಯಕ ಆಯುಕ್ತರು ನಗರದ ಹಳೇ ಗಬ್ಬೂರಿನ ಹೊರವಲಯದಲ್ಲಿರುವ ಒಂದು ಗೋಡೌನ್ ದಲ್ಲಿ ದಾಳಿ ಮಾಡಿದಾಗ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಗಾಟ ಮಾಡುವ ಖದೀಮರು ಹಾಗೂ ಅಂಗನವಾಡಿ ಕಾರ್ಯಕರ್ತರು ಸೇರಿ 26 ಆರೋಪಿಗಳನ್ನು ಕಸಬಾಪೇಟ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಒಟ್ಟು 329 ಚೀಲಗಳಲ್ಲಿದ್ದ 8 ಟನ್ 84 ಕೆಜಿ ಪೌಷ್ಟಿಕ ಆಹಾರದ ಪ್ಯಾಕೆಟ್ ಹಾಗೂ ಒಂದು ಬೊಲೆರೋ ವಾಹನ ವಶಪಡಿಸಿಕೊಳ್ಳಲಾಗಿದ್ದು, ಅಲ್ಲದೇ ಆರೋಪಿತರ ನ ಮೊಬೈಲ್ ಫೋನ್ ಗಳನ್ನು ವಶಕ್ಕೆ ತಗೆದುಕೊಂಡು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಪ್ರಕರಣದ ಪ್ರಮುಖ ಆರೋಪಿಗಳಾದ ಬತುಲ್ ಹಾಗೂ ಫಾರೂಕ್ ತಲೆಮರೆಸಿಕೊಂಡಿದ್ದು ಪ್ರಕರಣದ ಈ ಕಿಂಗ್ ಪಿನ್ ಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಶಿವಕುಮಾರ ದೇಸಾಯಿ, ಬಸವರಾಜ ಭದ್ರಶೆಟ್ಟಿ, ಮೊಹಮ್ಮದ್ ಗೌಸ್ ಖಲೀಫಾ, ಗೌತಮ್ ಸಿಂಗ್ ಠಾಕೂರ್, ಮಂಜುನಾಥ ಮಾದರ, ಫಕ್ಕೀರೇಶ ಹಲಗಿ, ಕೃಷ್ಣ ಮಾದರ, ರವಿ ಹರಿಜನ, ಶಮಿಮಾ ಬಾನು ಮುಜಾವರ, ಶಮಿಮಾ ಬಾನು ದಾರುಗಾರ, ಬಿಬಿ ಆಯೆಷ ಕಾರಿಗಾರ, ರೇಷ್ಮಾ, ಶಾಹಿನಾ, ಫೈರೋಜ್ ಮುಲ್ಲಾ, ಬಿಬಿ ಆಯೇಷಾ, ಮೆಹಬೂಬಿ ಹುಲ್ಯಾಳ್, ಶಕುಂತಲಾ ನ್ಯಾಮತಿ, ಚಿತ್ರ ಉರಾಣಿಕರ, ಮೀನಾಕ್ಷಿ ಬೆಟಗೇರಿ, ಹೀನಾ ಕೌಸರ್, ಹೀನಾ ಕೌಸರ್ ಮೇಸ್ತ್ರಿ, ಶೀಲಾ ಹಿರೇಮಠ ಶೃತಿ, ಪರ್ವಿನ್ ಭಾನು, ರೇಣುಕಾ ಮತ್ತು ಗಂಗಮ್ಮ ಬಂಧಿತ ಆರೋಪಿಗಳು.

ಪ್ರಕರಣದ ಕಿಂಗ್ ಪಿನ್ ಕೂಡ ಅಂಗನವಾಡಿ ಕಾರ್ಯಕರ್ತೆ ಅನ್ನೋ ಮಾಹಿತಿ ಇದೆ, ಪ್ರತ್ಯಕ್ಷ, ಪರೋಕ್ಷವಾಗಿ ಅದರಲ್ಲಿ ಭಾಗಿಯಾದವರನ್ನ ಸಹ ವಶಕ್ಕೆ ಪಡೆಯುತ್ತೇವೆ, ಯಾರು ಕೂಡ ಇದುವರೆಗೂ ನನಗೆ ಒತ್ತಡ ಹಾಕಿಲ್ಲ, ಹಾಕಿದರೂ ನಾವು ಕೇಳುವ ಅವಶ್ಯಕತೆ ಇಲ್ಲ, ಆರೋಪಿ ಸ್ಥಾನದಲ್ಲಿರೋ ಮಹಿಳೆ ಹಿಂದುಗಳಿಗೆ ಬೈದಿರೋ ವಿಚಾರವನ್ನ ಪರಿಶೀಲನೆ ಮಾಡ್ತೇವೆ, ಈ ವಿಷಯದ ಬಗ್ಗೆ ಯಾರಾದ್ರೂ ಕಂಪ್ಲೇಂಟ್ ಕೊಟ್ರೆ ತಗೋತೀವಿ ಅಂತ ಎನ್ ಶಶಿಕುಮಾರ್ ಅವರು ಹೇಳಿದರು.
ಈ ಕುರಿತು ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು