ಹುಬ್ಬಳ್ಳಿ: ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಗುರುವಿನ ಪಾತ್ರ ಬಹು ಮುಖ್ಯವಾಗಿರುತ್ತೆ. ಅಲ್ದೇ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಅಂತಾರೆ. ಆದ್ರೆ ಅದೇ ಗುರು ತನ್ನ ವಿದ್ಯಾರ್ಥಿನಿಯನ್ನ ತನ್ನ ಕಾಮತೃಷೆಗೆ ಬಳಸಿಕೊಂಡು ಲೈಂಗಿಕವಾಗಿ ಕಿರುಕುಳ ಮಾಡಿರುವ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಮನಗಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಇಂಗ್ಲಿಷ್ ಶಿಕ್ಷಕನೇ ಈ ಕೃತ್ಯ ಎಸಗಿದ್ದಾನೆ. ತನ್ನ ಶಾಲೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಆಕೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಇನ್ನು ಆ ಅಪ್ರಾಪ್ತ ಬಾಲಕಿಯ ಪೋಷಕರು ವೈದ್ಯಕೀಯ ತಪಾಸಣೆಗಾಗಿ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಲೈಂಗಿಕ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಬಟ್, ಈ ಘಟನೆಯಲ್ಲಿ ಒಂದು ಸಣ್ಣ ಟ್ವಿಸ್ಟ್ ಸಿಕ್ಕಿದ್ದು, ಈ ಘಟನೆ ನಡೆದಿರೋದು ಒಂದು ವರ್ಷದ ಹಿಂದೆಯಂತೆ. ಬಾಲಕಿ ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಸಂದರ್ಭದಲ್ಲಿ ಈ ಕಾಮಪಿಶಾಚಿ ಶಿಕ್ಷಕ ಈ ಕೃತ್ಯ ಎಸಗಿದ್ದಾನೆ. ಆದ್ರೆ ಒಂದು ವರ್ಷದ ನಂತರ ಬಾಲಕಿಯ ಪೋಷಕರು ಇದೀಗ ವೈದ್ಯಕೀಯ ತಪಾಸಣೆ ಹಾಗೂ ಪೊಲೀಸರ ಮೊರೆ ಹೋಗಿದ್ದು ಯಾಕೆ ಎಂಬ ಪ್ರಶ್ನೆ ಮೂಡಿದ್ದು, ಶಿಕ್ಷಕನ ಈ ಅಮಾನುಷ ಕೃತ್ಯ ಹಾಗೂ ಬಾಲಕಿಯ ಪೋಷಕರ ಈ ಜಾಣ ನಡೆಯ ಅಸಲೀ ಕಹಾನಿ ಏನೆಂಬುದು ಪೊಲೀಸರಿಗೇ ತಲೆನೋವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ ಶಾಲೆಗೆ ಬರುತ್ತಿದ್ದ ಅಪ್ರಾಪ್ತ ಬಾಲಕಿಯನ್ನ ಲೈಂಗಿಕವಾಗಿ ಬಳಸಿಕೊಂಡ ಕಾಮಪಿಶಾಚಿ ಶಿಕ್ಷಕನನ್ನ ನವನಗರ ಪೊಲೀಸರು ಬಂಧಿಸಿದ್ದು ಪೋಕ್ಸೋ ಪ್ರಕರಣದ ಅಡಿ ಜೈಲಿಗೆ ಅಟ್ಟಿದ್ದಾರೆ.