ಹುಬ್ಬಳ್ಳಿ: ನಗರದ ಗಬ್ಬೂರಿನ ಹೊರವಲಯದಲ್ಲಿ ಹೊರವಲಯದಲ್ಲಿ ಗೋಡೌನ್ ಒಂದರಲ್ಲಿ ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ನ ಬತುಲ್ ಕಿಲ್ಲೇದಾರ್ ನನ್ನು ಪಕ್ಷದಿಂದ ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ ಆದೇಶ ಹೊರಡಿಸಿದ್ದಾರೆ.

2021 ರಲ್ಲಿ ಪಾಲಿಕೆ ಚುನಾವಣೆಗೆ ಸ್ಪರ್ಧೆ ಮಾಡಿದ್ದ ಬತುಲ್, ಹುಧಾ ವಾರ್ಡ್ ನಂ. 77 ರಿಂದ ಸ್ಪರ್ಧೆ ಮಾಡಿದ್ದಳು. ಇದೀಗ ಮಕ್ಕಳ ಅನ್ನಕ್ಕೆ ಕನ್ನ ಹಾಕಿದ ಪ್ರಕರಣದಡಿಯಲ್ಲಿ ಹುಬ್ಬಳ್ಳಿಯಿಂದ ಪರಾರಿಯಾಗಿರೋ ಬುತುಲ್ ಕಳೆದ ವಾರ ಬತುಲ್ ಪತಿ ಫಾರೂಕ್ ಗೆ ಸೇರಿದ ಗೋಡೌನ್ ನಲ್ಲಿ ಮಕ್ಕಳ ಆಹಾರವನ್ನು ಸಂಗ್ರಹ ಮಾಡಲಾಗಿತ್ತು, ಅಕ್ರಮವಾಗಿ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡಿದ ಹಿನ್ನಲೆಯಲ್ಲಿ ಅಧಿಕಾರಿಗಳು ದಾಳಿ ಮಾಡಿದ್ದರು.

ಪತಿ ಫಾರೂಕ್ ಸೇರಿ ಮೂವರ ವಿರುದ್ಧ ದೂರು ದಾಖಲಾಗಿತ್ತು.ಇದೀಗ ಕಾಂಗ್ರೆಸ್ ನ ಕಾರ್ಯಕರ್ತೆ ಬತುಲ್ ಕಿಲೇದಾರ್ ಅಮಾನತುಗೊಂಡಿದ್ದಾಳೆ.