ಕಲಘಟಗಿ: ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನವನ್ನು ಕಳವು ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕಲಘಟಗಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಕುಂದಗೋಳ ತಾಲ್ಲೂಕಿನ ರಾಮನಕೊಪ್ಪ ಗ್ರಾಮದ ವಿಠಲ ಬಸಪ್ಪ ಕುರಾಡೆ (27) ಬಂಧಿತ ಆರೋಪಿ. ಬಂಧಿತನಿಂದ ಅಂದಾಜು ₹1.02 ಲಕ್ಷ ಮೌಲ್ಯದ ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ಫೆಬ್ರುವರಿ 22 ರಂದು ತಾಲ್ಲೂಕಿನ ಹುಣಸಿಕಟ್ಟಿ ಗ್ರಾಮದ ಮನೆ ಮುಂದೆ ನಿಲ್ಲಿಸಿದ ₹62 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಕಳವಾಗಿರುವ ಬಗ್ಗೆ ಹುಣಸಿಕಟ್ಟಿ ಗ್ರಾಮದ ಭೀಮಪ್ಪ ತೇಗಣ್ಣವರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಸಿಪಿಐ ಶ್ರೀಶೈಲ್ ಕೌಜಲಗಿ ಹಾಗೂ ಪಿಎಸ್ಐ ಸಿ.ಎನ್. ಕರವಿರಪ್ಪನವರ ನೇತೃತ್ವದಲ್ಲಿ ತಂಡ ಕಾರ್ಯಚರಣೆ ನಡೆಸಿ ಆರೋಪಿಯನ್ನು ಬಂಧನ ಮಾಡಿದ್ದಾರೆ.