ಧಾರವಾಡ: ಕ್ಷುಲಕ ವಿಚಾರಕ್ಕೆ ಬಾಲಕ ನೊರ್ವ ಬುದ್ಧಿ ಮಾಂದ್ಯ ಇರುವ ವ್ಯಕ್ತಿಯನ್ನು ಕೊಲೆ ಮಾಡಿದ ಘಟನೆ ಧಾರವಾಡದ ಹಳೇ ಎಪಿಎಂಸಿ ಬಳಿ ನಡೆದಿದೆ.

ಇಲಿಯಾಸ್ ಮಕಾನದಾರ(45) ಮೃತ ವ್ಯಕ್ತಿ. ಬಾಲ ಹಾಗೂ ಬುದ್ಧಿ ಮಾಂದ್ಯ ವ್ಯಕ್ತಿಯ ನಡುವ ಜಗಳ ಶುರುವಾಗಿ, ಬಾಲಕ ಬುದ್ಧಿ ಮಾಂದ್ಯ ವ್ಯಕ್ತಿಯ ತಲೆಗೆ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ, ತೀವ್ರ ರಕ್ತ ಸ್ರಾವದಿಂದ ಬಿದ್ದ ವ್ಯಕ್ತಿಯನ್ನು ಸ್ಥಳೀಯರು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ, ಆದರೆ ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಇನ್ನು ಹಲ್ಲೆ ಮಾಡಿದ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೋಲಿಸ್ ಕಮಿಷನರ್ ಎನ್ ಶಶಿಕುಮಾರ ಬೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಪಡೆಯುತ್ತಿದ್ದಾರೆ. ಈ ಕುರಿತು ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.