ಹುಬ್ಬಳ್ಳಿ: ಅನುಕೂಲಕ್ಕಾಗಿ ಸಾಲ ಪಡೆದು ಜೀವನ ನಡೆಸಬೇಕೆಂಬ ಉದ್ದೇಶದಿಂದ ಎಷ್ಟೋ ಬಡ ಕುಟುಂಬಗಳು ತಮ್ಮ ಜೀವನ ಸಾಗಿಸುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ದಂಧೆಕೋರರು ಬಡ ಜನರ ಅಸಹಾಯಕತೆಯನ್ನು ಉಪಯೋಗಿಸಿ ನೀಚ ಕೆಲಸ ಎಸಗಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹೌದು… ನವನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಒಂದು ಬಡ ಕುಟುಂಬವು, ವಿದ್ಯಾನಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಉಣಕಲ್ ನಿವಾಸಿ ಶಾಂತಾ ಚೌಹಾಣ್ ಎಂಬ ಮಹಿಳೆ ಬಳಿ ಬಡ್ಡಿ ರೂಪದಲ್ಲಿ ಹಣ ಪಡೆದಿದ್ದಾರೆ. ಬಡ್ಡಿ ಹಣ ವಸೂಲಿ ಮಾಡಲು ಈ ಶಾಂತಾ ಚೌಹಾಣ್, ಶಾನವಾಜ್ ಎಂಬ ಓರ್ವ ಲಫಂಗ ಯುವಕನನ್ನು ಛೂ ಬಿಟ್ಟಿದ್ದಾಳೆ.
ಬಡ್ಡಿ ಹಣ ವಸೂಲಿ ಮಾಡುತ್ತಾ ಶಾನವಾಜ್ ಆ ಬಡ ಕುಟುಂಬದ ಓರ್ವ ಯುವತಿಯ ಸಂಪರ್ಕ ಮಾಡಿ ಆಕೆಯ ಜೊತೆ ಪ್ರೀತಿಯ ನಾಟಕ ಮಾಡಿದ್ದಾನೆ. ಈ ಪ್ರೀತಿಯು ದೈಹಿಕವಾಗಿಯೂ ಮುಂದೊರೆದಿದೆ. ಬಳಿಕ ಆ ಯುವತಿ ಗರ್ಭಿಣಿ ಕೂಡ ಆಗಿದ್ದಾಳೆ. ಈ ವಿಷಯ ಲೋಫರ್ ಶಾನವಾಜ್ ಗಮನಕ್ಕೆ ಬಂದು, ಬಡ್ಡಿ ನೀಡಿದ ದಂಧೆಕೋರರ ಸಹಾಯದಿಂದ ಯುವತಿಯ ಅಬಾರ್ಷನ್ ಮಾಡುವ ಮೂಲಕ ಹೇಯ ಕೃತ್ಯ ಎಸಗಿದ್ದಾರೆ.
ಮುಂದೆ ಇಷ್ಟಕ್ಕೆ ಸುಮ್ಮನಾಗದ ಶಾನವಾಜ್ ತನ್ನ ತೀಟೆ ತೀರಿಸಿಕೊಳ್ಳುವ ಉದ್ದೇಶದಿಂದ ಹುಡುಗಿಯನ್ನು ಬ್ಲ್ಯಾಕ್ಮೇಲ್ ಮಾಡುತ್ತಾ ದೈಹಿಕ ಸಂಪರ್ಕ ಮುಂದುವರಿಸಿದ್ದಾನೆ. ಇತ್ತ ಏನೂ ಅರಿಯದ ಯುವತಿಯ ಪೋಷಕರು ಹುಡುಗಿಗೆ ಮದುವೆ ಮಾಡಲು ಬೇರೊಂದು ಸಂಬಂಧ ಗಟ್ಟಿ ಮಾಡಿದ್ದಾರೆ.

ಆದ್ರೆ ಈ ವಿಷಯ ತಿಳಿದ ಲೋಫರ್ ಶಾನವಾಜ್ ಎಲ್ಲಿ ತನ್ನ ದೈಹಿಕ ದಾಹ ತೀರಿಸುವ ಹುಡುಗಿ ಕೈ ಬಿಟ್ಟು ಹೋಗುತ್ತಾಳೆಂದು, ಯುವತಿಯ ಖಾಸಗಿ ಫೋಟೋಗಳು ಹಾಗೂ ವೀಡಿಯೋಗಳನ್ನ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ, ನನ್ನ ಬಿಟ್ಟು ಹೋದರೆ ನಿನ್ನ ಖಾಸಗಿ ವೀಡಿಯೋ ಹಾಗೂ ಫೋಟೋಗಳನ್ನು ವೈರಲ್ ಮಾಡುವುದಾಗಿ ಹೆದರಿಸಿದ್ದಾನೆ ಎಂದು ಯುವತಿಯ ಪೋಷಕರು ದಾಖಲಿಸಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಪ್ರಕರಣ ದಾಖಲಿಸಿಕೊಂಡ ವಿದ್ಯಾನಗರ ಇನ್ಸ್ಪೆಕ್ಟರ್ ಜಯಂತ್ ಗೌಳಿ ನೇತೃತ್ವದ ತಂಡ ತಡ ಮಾಡದೆ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ. ಇತ್ತ ವಿಷಯ ತಿಳಿದ ಲೋಫರ್ ಶಾನವಾಜ್ ತಲೆ ಮರೆಸಿಕೊಂಡಿದ್ದಾನೆ, ವಿದ್ಯಾನಗರ ಪೊಲೀಸರು ತಮ್ಮ ಚಾಣಾಕ್ಷತನದಿಂದ ಶಾನವಾಜ್ ನನ್ನು ವಶಕ್ಕೆ ಪಡೆದು ಕಂಬಿ ಹಿಂದೆ ತಳ್ಳಿದ್ದಾರೆ.
ಒಟ್ಟಿನಲ್ಲಿ ಬಡ ಜನರ ಆಸಹಾಯಕಥೆಯನ್ನೇ ಬಂಡವಾಳ ಮಾಡಿಕೊಂಡು ಇಂತಹ ಕೃತ್ಯ ಎಸಗಿರುವ ಬಡ್ಡಿ ದಂಧೆಕೋರರೂ ಹಾಗೂ ವಸೂಲಿ ಮಾಡುವ ಲೋಫರ್ ಗಳ ಸಂಖ್ಯೆ ಅವಳಿ ನಗರದಲ್ಲಿ ಹೆಚ್ಚಾಗಿದೆ, ಬಡ್ಡಿ ಹಣ ಪಡೆದು ಇಂತಹ ಸಮಸ್ಯೆಗಳನ್ನು ಎದುರಿಸುತ್ತಿರುವವರು ಕೂಡಲೇ ಪೊಲೀಸ್ ಇಲಾಖೆಯ ಗಮನಕ್ಕೆ ತಂದು, ಮುಂದೆ ಆಗುವಂತಹ ಅನಾಹುತಗಳನ್ನು ತಪ್ಪಿಸಿಕೊಳ್ಳುವುದು ಒಳ್ಳೆಯದು. ಪೋಲಿಸ್ ಇಲಾಖೆಯು ಕೂಡ ಇಂತವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ತಕ್ಕ ಪಾಠಕಲಿಸುವ ಅವಶ್ಯಕವಿದೆ.
ಸಂತೋಷ್ ಅರಳಿ, ಕರ್ನಾಟಕ ಪಬ್ಲಿಕ್ ವಾಯ್ಸ್…