ಹುಬ್ಬಳ್ಳಿ: ಕೆರೆಗೆ ಈಜಲು ಹೋದ ಮೂರು ಜನ ಸ್ನೇಹಿತರಲ್ಲಿ ಓರ್ವ ಯುವಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಧಾರುಣ ಘಟನೆ ನಗರದ ಉಣಕಲ್ ಕೆರೆಯಲ್ಲಿ ನಡೆದಿದೆ.
ನಗರದ ಬೆಂಗೇರಿ ನಿವಾಸಿ ಚೇತನ್ ಕಣಕನ್ನವರ್ (15) ಮೃತ ದುರ್ದೈವಿಯಾಗಿದ್ದು, ಬೆಂಗೇರಿಯ ಖಾಸಗಿ ಶಾಲೆಯೊಂದರಲ್ಲಿ ಒಂಬತ್ತನೇಯ ತರಗತಿಯಲ್ಲಿ ಓದುತ್ತಿದ್ದ. ಈತ ತನ್ನ ಸ್ನೇಹಿತರ ಜೊತೆಗೂಡಿ ಈಜಲು ಇಂದು ಸಂಜೆ ಉಣಕಲ್ ಕೆರೆಗೆ ತೆರಳಿದ್ದಾರೆ. ಅಲ್ಲೇ ವಾಕಿಂಗ್ ಮಾಡುತ್ತಿದ್ದ ಸಾರ್ವಜನಿಕರು ಯುವಕರಿಗೆ ಕೆರೆಯಲ್ಲಿ ಈಜಲು ಹೋಗಬೇಡ ಅಪಾಯ ಇದೆ ಅಂತ ಬುದ್ದಿ ಹೇಳಿದ್ದಾರಂತೆ. ಆದ್ರೆ ಅವರ ಮಾತು ಕೇಳದ ಯುವಕರು ಈಜಲು ಕೆರೆಗೆ ಇಳಿದ ಪರಿಣಾಮ ಯುವಕ ಚೇತನ್ ಏಕಾಏಕಿ ಮುಳುಗಿ ಸಾವನ್ನಪ್ಪಿದ್ದಾನ.
ಇನ್ನು ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸಂಜೆಯಿಂದಲೂ ಯುವಕನ ಶವಕ್ಕಾಗಿ ಹುಡುಕಾಟ ನಡೆಸಿದ್ದರೂ ಕೂಡ ಈವರೆಗೂ ಯುವಕನ ಶವ ಪತ್ತೆಯಾಗಿಲ್ಲ.
ಈ ಕುರಿತು ವಿದ್ಯಾನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸಿದ್ದಾರೆ.