ಹುಬ್ಬಳ್ಳಿ: ಬಿಹಾರಿ ಮೂಲದ ವ್ಯಕ್ತಿಯಿಂದ ನಾಲ್ಕು ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ಈ ವ್ಯಕ್ತಿ ಪೈಶಾಚಿಕ ಕೃತ್ಯ ಎಸಗಿದ ಆರೋಪಿಯಾಗಿದ್ದಾನೆ. ಬಾಲಕಿಯನ್ನು ಶೆಡ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದಾಗ ಬಾಲಕಿ ಕೂಗಾಟ ಕಂಡು ಶೆಡ್ ನತ್ತ ಸ್ಥಳೀಯರು ಧಾವಿಸಿದ್ದಾರೆ. ಸ್ಥಳೀಯರು ಧಾವಿಸುತ್ತಿದ್ದಂತೆ ಭಯಬಿದ್ದ ಸೈಕೋಪಾತ್ ಬಾಲಕಿ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಬಿಹಾರಿ ಮೂಲದ ವ್ಯಕ್ತಿಯ ಚಲನ ವಲನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೋಕನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು ಅಶೋಕ್ ನಗರ ಪೋಲಿಸ್ ಠಾಣೆಗೆ ಮುತ್ತಿಗೆ ಹಾಕಿ ಆರೋಪಿಯನ್ನು ಬಂಧನ ಮಾಡುವುದಲ್ಲದೆ ಆತನಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿದರು. ಇನ್ನು ಬೇರೆ ರಾಜ್ಯದಿಂದ ಕೆಲಸಕ್ಕಾಗಿ ಕರೆದುಕೊಂಡು ಬರುವ ಕಂಟ್ರಾಕ್ಟರ್ ಗಳು ಸಂಪೂರ್ಣ ಮಾಹಿತಿ ಪಡೆಯದೆ ಕೆಲ್ಸಕ್ಕೆ ಕರೆದುಕೊಂಡು ಬರುತ್ತಿದ್ದಾರೆ. ಅವರ ಮೇಲೆ ಕೂಡ ಕಠಿಣ ಕ್ರಮ ಜರುಗಿಸಬೇಕು, ಪೊಲೀಸರು ಕೂಡ ಹೊರ ರಾಜ್ಯದಿಂದ ಬಂದಂತಹ ವ್ಯಕ್ತಿಗಳ ಮಾಹಿತಿ ಪಡೆಯಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.