ಹುಬ್ಬಳ್ಳಿ: ಕೆರೆಯಲ್ಲಿ ಈಜಲು ತೆರಳಿದ್ದ ಬಾಲಕರು ಕಾಲು ಜಾರಿ ಮುಳಗಿ ಸಾವನ್ನಪ್ಪಿರುವ ಘಟನೆ ತಾಲೂಕಿನ ಗಾಮನಗಟ್ಟಿ ಗ್ರಾಮದಲ್ಲಿ ನಡೆದಿದೆ.
ಗಾಮನಗಟ್ಟಿ ಗ್ರಾಮದ ಮೇದಾರ ಓಣಿ ನಿವಾಸಿಗಳಾದ ಜೀವನ್ ಕುಮಾರ್ ಮೆದಾರ್ 14 ಮತ್ತು ಪವನ ತಡಸಿನಕೊಪ್ಪ 14 ಸಾವನ್ನಪ್ಪಿದ ಮೃತ ದುರ್ದೈವಿಗಳು. ಸ್ನಾನ ಮಾಡಲು ತೆರಳಿದ್ದ ಇಬ್ಬರು ಬಾಲಕರು ಕಾಲು ಜಾರಿ ಕೆರೆಯಲ್ಲಿ ಬಿದ್ದಿದ್ದಾರೆ. ಜೊತೆಯಲ್ಲಿದ್ದ ಇನ್ನೋರ್ವ ಬಾಲಕ ಆದ ಘಟನೆ ಕುರಿತು ಗ್ರಾಮಸ್ಥರಲ್ಲಿ ಮಾಹಿತಿ ನೀಡಿದಾಗ ಗ್ರಾಮಸ್ಥರು ಕೆರೆಯಲ್ಲಿ ಮುಳಗಿದ ಬಾಲಕರನ್ನು ಹೊರಗೆ ತಗೆದಿದ್ದು, ದುರದೃಷ್ಟವಶಾತ್ ಬಾಲಕರು ಸಾವನ್ನಪ್ಪಿದ್ದರು.

ಮೃತಪಟ್ಟ ಬಾಲಕರ ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಎಪಿಎಂಸಿ ನವನಗರ ಠಾಣೆಯ ಪೊಲೀಸರ ಇನ್ಸ್ಪೆಕ್ಟರ್ ಸಮಿವುಲ್ಲಾ ಕೆ, ಮಾಜಿ ಪಾಲಿಕೆ ಸದ್ಯ ಕರಿಯಪ್ಪ ಬೀಸಗಲ್ ಭೇಟಿ ನೀಡಿ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.