ಹುಬ್ಬಳ್ಳಿ: ಕಾಶ್ಮೀರದ ಪಹಲ್‌ಗಾಂ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ ಗೌರವ ಸ್ಮರಣಾರ್ಥ ಸಲ್ಲಿಸಿ, ದುರ್ಗದಬೈಲ್‌ನಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ವತಿಯಿಂದ ಕ್ಯಾಂಡಲ್ ಮಾರ್ಚ್ ಹಾಗೂ ಮೌನಾಚರಣೆ ಆಯೋಜಿಸಲಾಯಿತು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬಳಗದ ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್ ಗೋಕಾಕ್ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ, ಶ್ರದ್ಧಾಂಜಲಿಯೊಂದಿಗೆ ರಾಷ್ಟ್ರ ಭದ್ರತೆಗೆ ಪ್ರತಿಜ್ಞೆ ಮಾಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ನಾವು ನಮ್ಮ ದೇಶದ ಪ್ರಧಾನ ಮಂತ್ರಿಯವರ ಜೊತೆ ಇದ್ದೇವೆ. ಪಾಕಿಸ್ತಾನ ಒಳಗೆ ಪ್ರವೇಶಿಸಿ ಉಗ್ರರನ್ನು ಸೆದೆ ಬಡೆಯುವ ಶಕ್ತಿ ನಮಗಿದೆ. ನಮ್ಮ ಸೇನೆಯ ಧೈರ್ಯ ಮತ್ತು ಬಲದ ಬಗ್ಗೆ ನಮಗೆ ಹೆಮ್ಮೆ ಇದೆ,” ಎಂದು ಹೇಳಿದ್ದಾರೆ.

ಈ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಕಿರಣ್ ಉಪ್ಪಾರ್, ಹುಸೇನ್ ಬರದ್ ವಾಲೆ, ಅಷ್ಪಕ್ ಶಿರೂರು, ಕಿರಣ್ ಬಿಜ್ವಾಡ, ಎಲ್ಲಪ್ಪ ಅಂಬಿಗೇರ, ರಾಮಚಂದ್ರ ದಳವಿ, ದೀಪಕ್ ಕಲಾಲ್, ಗಣೇಶ್ ಅಂಬಿಗೇರ ಹಾಗೂ ಅನೇಕ ಅಭಿಮಾನಿ ಬಳಗದ ಸದಸ್ಯರು ಉಪಸ್ಥಿತರಿದ್ದು, ದೀಪ ಹಚ್ಚಿ ಶ್ರದ್ಧಾಂಜಲಿ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರು ದೇಶ ಭಕ್ತಿಯ ಘೋಷಣೆಗಳನ್ನು ಕೂಗುತ್ತಾ, ಹುತಾತ್ಮರ ಬಲಿದಾನವನ್ನು ಸ್ಮರಿಸಿದರು.