ಹುಬ್ಬಳ್ಳಿ: ಪುಟ್ಟ ಕಂದಮ್ಮನ ಮೇಲೆ ಬಿಹಾರಿ ಮೂಲದ ಪಾಪಿ ನಡೆಸಿದ ಕೃತ್ಯ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಬಿಹಾರಿ ಮೂಲದವರಿಂದ ಮತ್ತೊಂದು ದುರ್ಘಟನೆ ನಡೆದಿದೆ.
ಇದೇ ಏಪ್ರೀಲ್ 13 ರಂದು ನಗರದ ಅಶೋಕ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರದಲ್ಲಿ ಘನಘೋರ ಕೃತ್ಯವೊಂದು ನಡೆದಿತ್ತು. ಬದುಕಿ ಬಾಳಬೇಕಿದ್ದ ಐದು ವರ್ಷದ ಪುಟ್ಟ ಕಂದಮ್ಮನ ಮೇಲೆ ಬಿಹಾರಿ ಮೂಲದ ವ್ಯಕ್ತಿಯೊಬ್ಬ ಪೈಶಾಚಿಕ ಕೃತ್ಯ ಎಸಗಿ ಈಗಾಗಲೇ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಈ ಘಟನೆ ಮಾಸುವ ಮುನ್ನವೇ ಬಿಹಾರಿ ಮೂಲದ ಯುವಕನೋರ್ವ ನಿಗೂಢವಾಗಿ ಇದೀಗ ಸಾವನ್ನಪ್ಪಿದ್ದಾನೆ.

ನವನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗಾಮನಗಟ್ಟಿ ಹೊರವಲಯದಲ್ಲಿ ಚಪ್ಪಲಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತೂಫಾನ್ ಕುಮಾರ್ ಎಂಬ 20 ವರ್ಷದ ಯುವಕನೇ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ನಿನ್ನೆ ರಾತ್ರಿ 11.30 ಕ್ಕೆ ಈ ಯುವಕ ಹಾಗೂ ಯುವಕರ ಮಧ್ಯೆ ಹಳೆಯ ವೈಷಮ್ಯದ ಹಿನ್ನೆಲೆ ಗಲಾಟೆಯಾಗಿದೆ.ಆದ್ರೆ ಗಲಾಟೆಯ ನಂತರ ಯುವಕ ಬಿಲ್ಡಿಂಗ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಮೇಲ್ನೋಟಕ್ಕೆ ಇದು ಕೊಲೆಯೋ ಅಥವಾ ಸಹಜ ಸಾವೋ ಎಂಬ ಅನುಮಾನ ವ್ಯಕ್ತವಾಗಿದ್ದು, ನವನಗರ ಪೊಲೀಸ್ ಇನ್ಸ್ಪೆಕ್ಟರ್ ಸಮಿವುಲ್ಲಾ ಕೆ, ಹಾಗೂ ಪೊಲೀಸ್ ಸಿಬ್ಬಂದಿ ಯುವಕನೊಂದಿಗೆ ಗಲಾಟೆ ಮಾಡಿದ್ದ ಯುವಕರನ್ನ ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಒಟ್ನಲ್ಲಿ ಬಾಲಕಿ ಕೃತ್ಯ ಪ್ರಕರಣ ನಡೆದ ಬೆನ್ನಲ್ಲೇ ಬಿಹಾರಿ ಮೂಲದವರ ಮೇಲೆ ಸೂಕ್ತ ಕ್ರಮಕೈಗೊಳ್ಳಬೇಕು, ಬಿಹಾರಿ ಮೂಲದವರ ಮೇಲೆ ತೀವ್ರ ನಿಗಾ ವಹಿಸಬೇಕು ಅನ್ನೋದು ಸಾರ್ವಜನಿಕರ ಆಗ್ರಹದ ನಂತರವೂ ಇದೀಗ ಈ ರೀತಿ ಮತ್ತೆ ಬಿಹಾರಿ ಮೂಲದ ಯುವಕರಿಂದ ಮತ್ತೊಂದು ಕೃತ್ಯ ನಡೆದಿರುವುದು ಅವಳಿ ನಗರದ ನಾಗರೀಕರಿಗೆ ಮತ್ತಷ್ಟು ಅಸಮಾಧಾನವುಂಟು ಮಾಡಿದೆ.
ಅದೇನೇ ಇರ್ಲಿ ಅವಳಿ ನಗರದ ಬಹುತೇಕ ಕಡೆಗಳಲ್ಲಿ ಅದೆಷ್ಟೋ ಜನ ಬಿಹಾರದಿಂದ ವಲಸೆ ಬಂದು ಬೀಡು ಬಿಟ್ಟಿದ್ದಾರೆ. ಹೀಗೆ ಬಿಹಾರಿ ಹಾಗೂ ಹೊರರಾಜ್ಯಗಳಿಂದ ಬಿಡು ಬಿಟ್ಟಿರುವ ಕಾರ್ಮಿಕರ ಚಲನವಲನಗಳನ್ನ ಗಮನಿಸಿ ಅಂತವರ ಮೇಲೆ ಇನ್ನಾದ್ರೂ ಪೊಲೀಸ್ ಇಲಾಖೆ ಹದ್ದಿನ ಕಣ್ಣಿಡುವ ಕೆಲಸ ಮಾಡಿದ್ರೆ ಮಾತ್ರ ಈ ರೀತಿ ಪ್ರಕರಣಗಳಿಗೆ ಕಡಿವಾಣ ಬೀಳೋಕೆ ಸಾಧ್ಯ ಅನ್ನೋದು ಪ್ರಜ್ಞಾವಂತ ನಾಗರೀಕರ ಅಭಿಪ್ರಾಯ.