ಹುಬ್ಬಳ್ಳಿ: ಮನೆಯಲ್ಲಿ ಯಾರು ಇಲ್ಲದ ಸಮಯ, ಮನೆಯ ಹಿತ್ತಲ ಬಾಗಿಲು ಕೀಲಿ ಮುರಿದು, ಮನೆಯಲ್ಲಿ ಇದ್ದ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಬಂಧನ ಮಾಡುವಲ್ಲಿ ಕಸಬಾಪೇಟ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಇಸ್ಲಾಂಪೂರ್ ಗದಗಪುರ ಲೇಔಟ್ ನಲ್ಲಿ ವಾಸವಿರುವ ಶಬ್ಬೀರ್ ಗದಗ್ ಕರ್ ಹಾಗೂ ಕುಟುಂಬಸ್ಥರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಯಲ್ಲಿದ್ದ 190 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಕಸಬಾಪೇಟ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳುರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಳ್ಳತನ ಮಾಡಿದ್ದ 20 ವರ್ಷದ ಮುಸ್ಸಬ್ಬಿರ ಗದಗ್ ಕರ್ ಎಂಬ ಆರೋಪಿಯನ್ನು ಬಂಧನ ಮಾಡಿ ಆತನಿಂದ 18 ಲಕ್ಷ ಕಿಮ್ಮತ್ತಿನ 190 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಎಸಿಪಿ ಉಮೇಶ್ ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ, ಕಸಬಾಪೇಟೆ ಪೊಲೀಸ ಠಾಣೆಯ ಇನ್ಸಪೆಕ್ಟರ ರಾಘವೇಂದ್ರ ಹೆಚ್. ಹಳ್ಳೂರ ಅವರ ನೇತೃತ್ವದಲ್ಲಿ ಪಿಎಸ್ಐ ಚಂದ್ರಶೇಖರ್ ಎಂ, ಎ.ಎಸ್.ಐ ಸಿ.ಎಸ್ ಅಂಗಡಿಯವರ ಹಾಗೂ ಸಿಬ್ಬಂದಿಗಳಾದ ಐ. ಕೆ. ಧಾರವಾಡ, ಬಿ. ಎಫ್. ಬೆಳಗಾವಿ, ಎಲ್ ವಾಯ್ ಪಾಟೀಲ, ಆರ್. ಎಸ್. ರಾಠೋಡ, ಹೆಚ್.ಆರ್ ರಾಮಾಪುರ, ಹೆಚ್.ಟಿ ಬ್ಯಾಡಗಿ ಹಾಗೂ ಪಾಲಯ್ಯ ಎನ್ ಕಾರ್ಯಾಚರಣೆ ನಡೆಸಿದ್ದು, ಇವರುಗಳ ಕಾರ್ಯವೈಖರಿಯನ್ನು ಪೋಲಿಸ್ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.