ಹುಬ್ಬಳ್ಳಿ: ನಗರದ ಉಣಕಲ್ ಕ್ರಾಸ್ ದಿಂದ ಶ್ರೀ ಕಾಡಸಿದ್ದೇಶ್ವರ ಕಾಲೇಜುವರೆಗೆ ಎರಡು ಬದಿಯಲ್ಲಿ ಶಾಲಾ ಕಾಲೇಜುಗಳಿದ್ದು, ಸಂಚಾರ ನಿಯಮ ಉಲ್ಲಂಘಿಸಿ ದಿನನಿತ್ಯ ಮುಖ್ಯ ರಸ್ತೆಯ ಬದಿಯಲ್ಲಿಯೇ ವಾಹನಗಳನ್ನು ವಿದ್ಯಾರ್ಥಿಗಳು ನಿಲುಗಡೆ ಮಾಡುತ್ತಿದ್ದು, ಸಂಚಾರ ವಾಹನಕ್ಕೆ ತೊಂದರೆ ಅಡೆ-ತಡೆ ಮಾಡುತ್ತಿದ್ದು, ಸಂಚಾರಿ ಠಾಣೆಯ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅದೇ ಸ್ಥಳದಲ್ಲಿಯೇ ಪ್ರತಿಭಟನೆ ಮಾಡಲಾಗುವುದು ಎಂದು ಕರ್ನಾಟಕ ದಲಿತ ವಿಮೋಚನಾ ಸಮಿತಿ ವತಿಯಿಂದ ಉತ್ತರ ವಲಯ ಸಂಚಾರ ಸಹಾಯಕ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಸಂಚಾರ ಪೊಲೀಸರು ವಾಹನ ನಿಲುಗಡೆ ಹಾಗೂ ಸಂಚಾರ ನಿಯಮದ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದರೂ ಕೂಡಾ ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡುವ ಮೂಲಕ ವಾಹನ ಸವಾರರು ಸಂಚಾರ ನಿಯಯ ಉಲ್ಲಂಘನೆ ಮಾಡುತ್ತಿದ್ದಾರೆ. ಇನ್ನೂ ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ವಾಹನಗಳನ್ನು ನಿಲುಗಡೆ ಮಾಡದೇ ಕಾಲೇಜು ಹೊರಗಿನ ಮುಖ್ಯ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡುತ್ತಿದ್ದು, ವಾಹನ ಸವಾರರಿಗೆ ಕಿರಿಕಿರಿಯುಂಟಾಗುತ್ತಿದೆ ಅಲ್ಲದೆ ರಸ್ತೆ ಕಿರಿದಾಗಿರುವುದರಿಂದ ರಸ್ತೆ ಸಂಚಾರಕ್ಕೆ ಅಡೆತಡೆಯುಂಟಾಗುತ್ತಿದೆ.

ಈ ನಿಟ್ಟಿನಲ್ಲಿ ಸಂಚಾರ ಪೊಲೀಸ್ ಅಧಿಕಾರಿಗಳು ಕಾರುಗಳಿಗೆ ವಿಲ್ ಲಾಕ್ ಹಾಗೂ ದ್ವಿಚಕ್ರ ವಾಹನಗಳಿಗೆ ನಿಲುಗಡೆ ನಿಷೇಧ ಸ್ಥಳದಲ್ಲಿರುವ ವಾಹನಗಳಿಗೆ ದಂಡ ಪಾವತಿ ಮಾಡಬೇಕು. ಆದ್ದರಿಂದ ಸಂಚಾರ ನಿಯಮ ಉಲ್ಲಂಘನೆ ಮಾಡುವವರಿಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಈ ಮೂಲಕ ರಸ್ತೆ ಅಪಘಾತಗಳನ್ನು ತಪ್ಪಿಸಬಹುದು ಹಾಗೂ ಸಂಚಾರ ದಟ್ಟನೆ ನಿಯಂತ್ರಿಸಬಹುದು ಎಂದು ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಹುಬ್ಬಳ್ಳಿ ಶಹರ ಸಮಿತಿ ಅಧ್ಯಕ್ಷರಾದ ಶ್ರೀಧರ ಕಂಗಲ್, ಸಂದೀಪ್ ಪೂಜಾರಿ, ರಾಜು ವಾಗ್ಮೊಡೆ, ಸುರೇಂದ್ರ ಮೊರೆ, ಮಂಜುನಾಥ ಕಟಿಗನ್ನವರ್, ಶಮೀಮ ರಾಟಿ, ಮಂಜುನಾಥ ಕೊರಟ್ಟಿ, ಅಮಿತ್ ದರ್ಶನ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.