ಹುಬ್ಬಳ್ಳಿ: ಸಾಕಷ್ಟು ಮನೆಗಳ್ಳತನ ಎಸಗಿ ಪರಾರಿಯಾಗುತ್ತಿದ್ದ ಹಾಗೂ ಪೊಲೀಸರಿಗೆ ತಲೆ ನೋವಾಗಿದ್ದ ಚಾಲಾಕಿ ಕಳ್ಳನನ್ನು ಬಂಧನ ಮಾಡುವಲ್ಲಿ ಬೆಂಡಿಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ದೊಡ್ಡಮನಿ ಕಾಲೋನಿಯ ನಿವಾಸಿ ಅಮನ್ ಬೇಪಾರಿ (24) ಬಂಧಿತ ಆರೋಪಿ, ವೃತ್ತಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ. ಇವನ ವೃತ್ತಿಯನ್ನು ಹೊರತು ಪಡಿಸಿ ಮನೆ ಕಳ್ಳತನ ಮಾಡುವುದನ್ನು ಶುರು ಮಾಡಿದ್ದಾನೆ. ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಕೀಟಕಿಗಳನ್ನೇ ಟಾರ್ಗೆಟ್ ಮಾಡಿ, ಅವುಗಳನ್ನು ಎಕ್ಸಾ ಬ್ಲೇಡ್ ನಿಂದ ಕಟ್ ಮಾಡಿ ಒಳ ನುಗ್ಗಿ ಮನೆಯಲ್ಲಿದ್ದ ಬಂಗಾರ ಹಾಗೂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ.
ಪ್ರಕರಣವನ್ನು ದಾಖಲಿಸಿಕೊಂಡ ಬೆಂಡಿಗೇರಿ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಕಳ್ಳತನ ಎಸಗಿದ ಆರೋಪಿಯನ್ನು ಚಾಣಾಕ್ಷತೆಯಿಂದ ಬಂಧನ ಮಾಡಿ ಆತನಿಂದ 6.37 ಲಕ್ಷ ಕಿಮ್ಮತ್ತಿನ ಆಭರಗಳನ್ನು ವಶಕ್ಕೆ ಪಡೆದ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ದಕ್ಷಿಣ ವಿಭಾಗದ ಎಸಿಪಿ ಉಮೇಶ್ ಚಿಕ್ಕಮಠ ಮಾರ್ಗದರ್ಶನದಲ್ಲಿ, ಬೆಂಡಿಗೇರಿ ಇನ್ಸ್ಪೆಕ್ಟರ್ ಎಸ್ ಆರ್ ನಾಯಕ್ ಅವರ ನೇತೃತ್ವದಲ್ಲಿ, ಪಿಎಸ್ಐ ರವಿ ವಡ್ಡರ, ಸಿಬ್ಬಂದಿಗಳಾದ ಎನ್.ಐ.ನೀಲಗಾರ, ಸಿ.ಎಫ್.ಅಂಬಿಗೇರ, ಹೆಚ್.ಎಮ್.ಕರಗಾಂವಿ, ಆರ್.ಎಸ್.ಹರಕಿ, ಬಿ.ಎಸ್.ಗಳಗಿ, ಎಸ್.ಎಸ್.ಮೇಟಿ, ಆರ್.ಎಚ್.ಹಿತ್ತಲಮನಿ, ಎಸ್.ಬಿ.ವಾಲಿಕಾರ. ಜಿ.ಎಸ್.ವಗ್ಗಣ್ಣನವರ ಇವರುಗಳ ಕಾರ್ಯವೈಖರಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ರವರು ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.