ಹುಬ್ಬಳ್ಳಿ: ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಮನನೊಂದು ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಎಸ್ ಎಂ ಕೃಷ್ಣ ನಗರದ ನಿವಾಸಿ ಬಾಷಾ ಸಾಬ್ ಸಂಕೇಶ್ವರ್ (65) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ ಹಲವು ದಿನಗಳಿಂದ ಬಾಷಾ ಸಾಬ್ ನಾಲ್ಕೈದು ಜನರ ಬಳಿ ಕೈಗಡ ಸಾಲ ಪಡೆದಿದ್ದನಂತೆ. ಅದರಂತೆಯೇ ಹಣ ವಾಪಸ್ ನೀಡೋದಾಗಿ ಲಲಿತಾ, ಕಿಟ್ಯಾ, ವಿನೋದ ಬಂಕಾಪುರ, ಅಷ್ಪಕ್ ರಿಂದ ಕಿರುಕುಳ ನೀಡುತ್ತಿದ್ದರಂತೆ. ಅಲ್ದೇ ಲಲಿತಾ, ಕಿಟ್ಯಾ ರಿಂದ ದಿನ ದುಡಿಯುವ ಆಟೋ ಸಹ ಕಿತ್ತುಕೊಳ್ಳುವ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಮೃತ ವ್ಯಕ್ತಿ ವೀಡಿಯೋ ಮೂಲಕ ಆರೋಪ ಮಾಡಿದ್ದಾನೆ.
ಇನ್ನು ಗಾರ್ಡನ್ ಪೇಟೆಯಲ್ಲಿನ ಮನೆ ಮಾರುವ ವಿಚಾರದಲ್ಲೂ ಕೂಡ ಬಾಷಾ ಗೆ ಮೋಸ ಮಾಡಿರುವ ಆರೋಪ ಆಗಿದ್ದು, ಕಾಂಗ್ರೆಸ್ ಮುಖಂಡ ಅಲ್ತಾಫ್ ಹಳ್ಳೂರ ನೇತೃತ್ವದಲ್ಲಿ ಸಾಲ ಪಡೆದಿದ್ದರ ಬಗ್ಗೆ ಮಾತುಕತೆ ಸಹ ನಡೆದಿತ್ತಂತೆ. 1.80 ಲಕ್ಷಕ್ಕೆ ನಡೆದಿದ್ದ ಮಾತುಕತೆ ವಿಚಾರವನ್ನ ವಿಡಿಯೋದಲ್ಲಿ ತಿಳಿಸಿರೋ ಬಾಷಾ. ಯಾವುದೇ ರೀತಿಯಾಗಿ ಹಣ ನೀಡಿದೇ ಮಾನಸಿಕ ಕಿರುಕುಳದಿಂದಲೂ ನೊಂದಿದ್ದ ಎನ್ನಲಾಗಿದೆ. ಇನ್ನು ಮನೆ ಖರೀದಿಸಿದ್ದ ಸೀರಾಜ್ ಮಿರ್ಜಿಯಿಂದ ಹಾಗೂ ಈತನೊಂದಿಗೆ ಬಶೀರ್ ಎಂಬುವವರಿಂದಲೂ ಸಹ ಹಲ್ಲೆ ಹಾಗೂ ಧಮಕಿ ಹಾಕಿರೋದಾಗಿ ವೀಡಿಯೋದಲ್ಲಿ ಆರೋಪ ಮಾಡಿದ್ದಾನೆ.
https://www.instagram.com/reel/DKZb70GSoSl/?igsh=MXVqODZ6eHRobHBiMw==
ಹೀಗಾಗಿ ಸಾಲಗಾರರಿಂದ ಬೇಸತ್ತು ವೀಡಿಯೋ ಮಾಡಿ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರಿಗೆ ಮನವಿ ಮಾಡಿ ನ್ಯಾಯ ಒದಗಿಸುವಂತೆ ಕೋರಿ ನಿನ್ನೆ ರಾತ್ರಿ 8 ಗಂಟೆಯ ವೇಳೆಗೆ ಸಂಬಂಧಿಕರ ಮನೆಯ ಕಾರ್ಯಕ್ರಮದಲ್ಲಿ ತೆರಳಿದಾಗ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಇನ್ನು ಬಾಷಾ ಸಾಬ್ ಕುಟುಂಬಸ್ಥರ ಪೊಲೀಸ್ ಕಮಿಷ್ನರ್ ಎನ್ ಶಶಿಕುಮಾರ್ ಸ್ಥಳಕ್ಕೆ ಬರುವವರೆಗೆ ಶವ ಸಂಸ್ಕಾರ ಮಾಡಲ್ಲ ಎನ್ನುತ್ತಿದ್ದಾರೆ. ಸದ್ಯ ಈ ಕುರಿತು ಕಸಬಾಪೇಟ್ ಪೋಲಿಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಒಟ್ಟಿನಲ್ಲಿ ಅವಳಿ ನಗರದಲ್ಲಿ ಹೀಗೆ ಹಲವಾರು ಘಟನೆಗಳು ನಡೆದಿದ್ದು, ಈಗಲಾದರೂ ಜನರು ಇಂತಹ ಬಡ್ಡಿ ದಂಧೆಕೋರರ ಕಿರುಕುಳಕ್ಕೆ ಒಳಗಾಗಿದ್ದಾರೆ ಕೂಡಲೇ ಪೊಲೀಸರ ಗಮನಕ್ಕೆ ಅಥವಾ ಪೋಲಿಸ್ ಕಮಿಷನರ್ ಅವರ ಗಮನಕ್ಕೆ ತರುವ ಮೂಲಕ, ಮುಂದೆ ಆಗುವಂತಹ ಘಟನೆಗಳನ್ನು ತಪ್ಪಿಸ ಬಹುದು.