ಹುಬ್ಬಳ್ಳಿ: ಜಮೀನು ಗುತ್ತಿಗೆ ವಿಚಾರಕ್ಕೆ ಆರಂಭವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ. ಜಮೀನು ಉಳಿಮೆಗೆ ಗುತ್ತಿಗೆ ವಿಚಾರಕ್ಕೆ ನಡೆದ ಜಗಳ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದೆ. ಜಗಳದಲ್ಲಿ ಎದೆಗೆ ಒದ್ದ ಕಾರಣ ಕುಸಿದು ಬಿದ್ದು, ರೈತನೊಬ್ಬ ಸಾವನಪ್ಪಿದ್ದಾನೆ.
ಹುಬ್ಬಳ್ಳಿ ಹೊರವಲಯದ ಮಂಟೂರು ರಸ್ತೆಯ ಜಮೀನಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ಜಗಳದಲ್ಲಿ ಬಸಪ್ಪ ಕುಸುಗಲ್ (65) ಎಂಬುವವರ ಎದೆಗೆ ಒದ್ದಿರುವ ಕಾರಣ ಕುಸಿದು ಬಿದ್ದ ಬಸಪ್ಪ ಕುಸುಗಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಸಾವನ್ನಪ್ಪಿದ್ದಾನೆ. ಮೃತನ ಕುಟುಂಬಸ್ಥರು, ನಿಂಗರೆಡ್ಡಿ, ದೊಡ್ಡರೆಡ್ಡಿ ಎನ್ನುವವರಿಂದ ಹಲ್ಲೆ ಮತ್ತು ಕೊಲೆಯಾಗಿದೆ ಎಂದು ಆರೋಪಿಸಿದ್ದಾರೆ.
ಮಹಾದೇವಿ ಗಂಜಾಳಗೆ ಸೇರಿದ್ದ ಮೂರು ಎಕರೆ ಜಮೀನನ್ನು ಹಲವು ವರ್ಷಗಳಿಂದ ಗುತ್ತೆಗೆ ಪಡೆದು ನಿಂಗರೆಡ್ಡಿ, ದೊಡ್ಡರೆಡ್ಡಿ ಎಂಬುವವರು ಉಳಿಮೆ ಮಾಡುತ್ತಿದ್ದರು. ಆದರೆ ಈ ಬಾರಿ ನಿಂಗರೆಡ್ಡಿ, ದೊಡ್ಡರೆಡ್ಡಿಯಿಂದ ಗುತ್ತಿಗೆ ನಿಲ್ಲಿಸಿದ್ದ ಜಮೀನ ಮಾಲಕಿ ಮಹಾದೇವಿ ಗಂಜಾಳ, ಬಸಪ್ಪ ಕುಸುಗಲ್ ಅವರಿಗೆ ನೀಡಿದ್ದಾರೆ. ಇದರಿಂದ ಬಸಪ್ಪನ ಮೇಲೆ ಸಿಟ್ಟಾಗಿದ್ದ ನಿಂಗರೆಡ್ಡಿ, ದೊಡ್ಡರೆಡ್ಡಿ ಇಬ್ಬರೂ ಸೇರಿ ಬಸಪ್ಪ ಕುಸುಗಲ್ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರಂತ ಮೃತನ ಪುತ್ರ ಗಂಭೀರವಾಗಿ ಆರೋಪಿಸದ್ದಾರೆ.
ಇನ್ನೂ ಮತ್ತೊಂದು ಕಡೆ ಗುತ್ತಿಗೆ ಪಡೆದ ಬಸಪ್ಪ ಇಂದು ಜಮೀನಿನಲ್ಲಿ ಬೀಜಬಿತ್ತೆನೆಗೆ ಮುಂದಾಗಿದ್ದ. ಹೀಗಾಗಿ ಇಂದು ಜಮೀನಿಗೆ ತೆರಳಿ ಬಸಪ್ಪ ಜೊತೆಗೆ ಜಗಳ ಮಾಡಿದ ನಿಂಗರೆಡ್ಡಿ, ದೊಡ್ಡರೆಡ್ಡಿ, ಈ ವೇಳೆ ಬಸಪ್ಪನ ಎದೆಗೆ ಒದ್ದಿದ್ದಾರೆ. ಎದೆಗೆ ಒಳಪೆಟ್ಟಾಗಿ ಬಸಪ್ಪ ಸಾವನ್ನಪ್ಪಿರುವ ಆರೋಪವನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ. ಬಸಪ್ಪನ ಮೃತದೇಹ ಕೆಎಂಸಿ ಶವಗಾರಕ್ಕೆ ರವಾನೆ ಮಾಡಲಾಗಿದೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಟ್ಟಿನಲ್ಲಿ ಜಮೀನು ಗುತ್ತಿಗೆ ವಿಷಯದ ಜಗಳ ಜೀವವನ್ನೇ ಬಲಿ ಪಡೆದಿದೆ. ಸಣ್ಣ ಪುಟ್ಟ ವಿಷಯಗಳು ಜೀವ ತೆಗೆಯುವ ಮಟ್ಟಕ್ಕೆ ಹೋಗುತ್ತಿರುವುದು ನಿಜಕ್ಕೂ ವಿಪರ್ಯಾಸಕರ ಸಂಗತಿಯಾಗಿದೆ. ಈ ಬಗ್ಗೆ ಪೊಲೀಸ್ ಕಮೀಷನರೇಟ್ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಗಳನ್ನು ಜರುಗಿಸುವ ಕಾರ್ಯವನ್ನು ಮಾಡಬೇಕಿದೆ