ಹುಬ್ಬಳ್ಳಿ: ನಿನ್ನೆ ರಾತ್ರಿ ಸತತ ಸುರಿದ ಭಾರಿ ಮಳೆಯಿಂದಾಗಿ ವಾಣಿಜ್ಯ ನಗರ ಭಾಗಶಃ ಜಲಾವೃತಗೊಂಡು ಜನರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದ್ದು, ಇನ್ನೊಂದೆಡೆ ಓರ್ವ ವ್ಯಕ್ತಿ ನೀರಿನ ರಭಸಕ್ಕೆ ಕೊಚ್ಚಿ ಹೋದ ಘಟನೆ ನಡೆದಿದೆ.

ಹುಸೇನ ಮಾಬುಸಾಬ ಕಳಸ (55) ಬಿರಬಂದ ಒನಿಯ ನಿವಾಸಿ ನೀರಿನಲ್ಲಿ ಕೊಚ್ಚಿ ಹೋದ ವ್ಯಕ್ತಿ. ಬೈಕನಲ್ಲಿ ಬರುತ್ತಿದ್ದ ವೇಳೆ ನಗರದ ಮಾವನೂರ ರೋಡ ಬ್ರಿಡ್ಜ ಹತ್ತಿರ, ಚರಂಡಿಯ ಮಳೆ ನೀರಿಗೆ ಕೊಚ್ಚಿ ಹೋಗಿದ್ದಾನೆ, ಬೈಕ ಹಿಂದೆ ಕುಳಿತ ವ್ಯಕ್ತಿ ಮಹ್ಮದ್ ರಪೀಕ್ ಮುಲ್ಲಾ ಪಾರಾಗಿದ್ದಾನೆ.

ಇನ್ನು ಕೊಚ್ಚಿ ಹೋದ ವ್ಯಕ್ತಿಯ ಹುಡುಕುವ ಕಾರ್ಯಾಚರಣೆಯನ್ನು ಪಾಲಿಕೆ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮುಂದುವರೆಸಿದ್ದು, ಸ್ಥಳಕ್ಕೆ ಹುಬ್ಬಳ್ಳಿ ಧಾರವಾಡ ಪೋಲಿಸ್ ಆಯುಕ್ತ ಎನ್ ಶಶಿಕುಮಾರ, ಕಸಬಾಪೇಟ್ ಠಾಣೆಯ ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಕಸಬಾಪೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.