ಹುಬ್ಬಳ್ಳಿ: ಇತ್ತೀಚಿಗೆ ನಗರದ ಸಾರ್ವಜನಿಕ ಸ್ಥಳದಲ್ಲಿ ತಲವಾರಗಳನ್ನು ಹಿಡಿದುಕೊಂಡು ರೀಲ್ಸ್ ಮಾಡುತ್ತಿದ್ದ ವೀಡಿಯೋ ವೈರಲ್ ಆದ ಘಟನೆಗೆ ಸಂಬಂಧಿಸಿದಂತೆ ಎರೆಡು ಜನರನ್ನು ಬಂಧನ ಮಾಡುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಲ್ಲಿನ ಹಳೇ ಹುಬ್ಬಳ್ಳಿ ಹೊಸ ಆನಂದನಗರದ ಸಮೀಪದ ಮಸೀದಿ ಬಳಿ ಇತ್ತೀಚಿಗೆ ಎರೆಡು ಜನ ತಲಾವಾರ ಹಿಡಿದು ರೀಲ್ಸ್ ಮಾಡುತ್ತಿದ್ದರು, ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, ಇಬ್ಬರನ್ನು ಬಂಧನ ಮಾಡಿ, ಇಂಡಿಯನ್ ಆರ್ಮ್ಸ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಂಧಿತ ಆರೋಪಿಗಳ ಹೆಚ್ಚಿನ ವಿಚಾರಣೆ ನಡೆಸಿದ ಸಂದರ್ಭ, ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ, ಹೌದು.. ಬಂಧಿತ ಆರೋಪಿಗಳು ತಮ್ಮ ಜೊತೆಗೆ ಇನ್ನೆರೆಡು ಜನರನ್ನು ಸೇರಿಸಿಕೊಂಡು ನಗರದ ವಿವಿಧ ಕಡೆಗಳಲ್ಲಿ ಚಿನ್ನಾಭರಣ ಹಾಗೂ ಮೋಟರ್ ಸೈಕಲ್ ಗಳನ್ನು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ.

ಗೋಪಾಲ ವಾಲ್ಮೀಕಿ, ಹನುಮಂತ ಮಣ್ಣವಡ್ಡರ, ಆರಿಫ್ ವಾಲ್ಮೀಕಿ, ಲಿಯಾಖತ್ತಅಲಿ ಮಡಗಾವಿ ಬಂಧಿತ ಆರೋಪಿಯಾಗಿದ್ದಾರೆ. ಬಂಧಿತರಿಂದ 9 ಬೈಕ್ ಗಳು, 2೦ ಗ್ರಾಂ ಬಂಗಾರದ ಸರ ಹಾಗೂ ಎರೆಡು ತಲ್ವಾರ್ ಗಳನ್ನು ಜಪ್ತಿ ಮಾಡಿದ್ದಾರೆ. ಒಟ್ಟು 6 ಲಕ್ಷ ರೂ. ಕಿಮ್ಮತ್ತಿನ ವಸ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಜೈಲಿಗೆ ಅಟ್ಟಿದ್ದಾರೆ.

ಎಸಿಪಿ ಉಮೇಶ್ ಚಿಕ್ಕಮಠ ಅವರ ಮಾರ್ಗದರ್ಶನದಲ್ಲಿ ಇನ್ಸಪೆಕ್ಟರ್ ಎಮ್. ಎನ್. ಸಿಂಧೂರ ನೇತೃತ್ವದ ತಂಡದಲ್ಲಿ ಪಿಎಸ್ಐ ಗಳಾದ ಬಿ.ಎನ್.ಸಾತಣ್ಣವರ, ವಿಶ್ವನಾಥ ಆಲಮಟ್ಟಿ ಹಾಗೂ ಸಿಬ್ಬಂದಿಗಳಾದ ಎ.ಎಸ್.ಐ ಪಿ.ಬಿ.ಕಾಳೆ, ಸಿಹೆಚ್ಸಿ ರವರಾದ ಅಭಯ ಕಟ್ನಳ್ಳಿ, ಕೃಷ್ಣಾ ಮೊಟೆಬೆನ್ನೂರ, ನಾಗರಾಜ ಕೆಂಚಣ್ಣನವರ, ಡಿ.ಬಿ.ಚಂಡೂನವರ, ಜೆ.ಎಸ್.ಮತ್ತಿಗಟ್ಟಿ ಸಿಪಿಸಿ ರವರಾದ ಕಲ್ಲನಗೌಡ ಗುರನಗೌಡ್ರ, ರಮೇಶ ಹಲ್ಲೆ ಹಾಗೂ ವಿಠಲ ಹೊಸಳ್ಳಿ ರವರು ಕಾರ್ಯಚರಣೆ ನಡೆಸಿದ್ದು, ಇವರುಗಳ ಕಾರ್ಯವೈಖರಿಯನ್ನು ಪೋಲಿಸ್ ಆಯುಕ್ತರಾದ ಎನ್ ಶಶಿಕುಮಾರ ಹಾಗೂ ಡಿಸಿಪಿಗಳಾದ ಮಹಾನಿಂಗ ನಂದಗಾವಿ ಹಾಗೂ ಸಿ ಆರ್ ರವೀಶ್ ಅವರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.