ಹುಬ್ಬಳ್ಳಿ: ಸ್ನೇಹಿತರೆಂದರೆ ಒಂದಿಷ್ಟು ತಮಾಷೆ ಹರಟೆ ಪರಸ್ಪರ ಕಾಲೆಳೆಯುವುದು ಸಹಜ, ಆದರೆ ಇದೇ ತಮಾಷೆ ಅತಿರೇಕಕ್ಕೆ ಹೋಗಿ ಸ್ನೇಹಿತನೋರ್ವ ತನ್ನ ಗೆಳೆಯನಿಗೆ ಚಾಕು ಹಾಕಿದ ಘಟನೆ ನಗರದ ದೇವರಗೂಡಿಹಾಳ ನಲ್ಲಿ ನಡೆದಿದೆ.

ನಗರದ ಶಿವಶಂಕರ್ ಕಾಲೋನಿ ನಿವಾಸಿ ಅವಿನಾಶ್ ಕೌದಿ (24) ಹಲ್ಲೆಗೆ ಒಳಗಾದ ಯುವಕ. ನಿನ್ನೆಯ ದಿನ ಪಾರ್ಟಿ ಇರುವುದಾಗಿ ಆತನ ಸ್ನೇಹಿತರು ಫೋನ್ ಕರೆ ಮಾಡಿ ದೇವರಗುಡಿಹಾಳಕ್ಕೆ ಕರೆಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ಅಭಿಷೇಕ್ ವಜ್ಜನ್ನವರ್ ಹಾಗೂ ಅವಿನಾಶ್ ನಡುವೆ ತಮಾಷೆ ನಡೆದು ಇದು ಪರಸ್ಪರ ಹೊಡೆದಾಡುವಷ್ಟು ಅತಿರೇಕಕ್ಕೆ ಹೋಗಿಗೆ. ತಮಾಷೆ ಸಹಿಸದ ಅಭಿಷೇಕ್ ಚಾಕುವಿನಿಂದ ಅವಿನಾಶ್ ಹೊಟ್ಟೆಗೆ ಚುಚ್ಚಿದ್ದಾನೆ.

ತೀವ್ರವಾಗಿ ಗಾಯಗೊಂಡ ಅವಿನಾಶ್ ನನ್ನು ಆತನ ಸ್ನೇಹಿತರು ಸೇರಿಕೊಂಡು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.