ಸಾಕಷ್ಟು ಚರ್ಚೆಯಲ್ಲಿದ್ದ ಪಾಲಿಕೆ ಆಯುಕ್ತರ ವರ್ಗಾವಣೆ ಹಾಗೂ ನೇಮಕ ಆಗಿದ್ದ ನೂತನ ಆಯುಕ್ತರ ಅಧಿಕಾರ ಸ್ವೀಕಾರಕ್ಕೆ ಸರಕಾರ ಬ್ರೇಕ್ ನೀಡಿದೆ.
ಹೌದು ಹುಬ್ಬಳ್ಳಿ ಧಾರವಾಡ ಪಾಲಿಕೆ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ರುದ್ರೇಶ್ ಗಾಳಿ ಅವರನ್ನು ಧಿಡೀರ್ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಮಂಜುನಾಥ್ ಡೊಂಬರ್ ಅವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು. ಇಂದು ಇನ್ನೇನು ಅಧಿಕಾರ ವಹಿಸಿಕೊಳ್ಳಲು ಮುಂದಾಗಿದ್ದ ಮಂಜುನಾಥ್ ಅವರಿಗೆ ಸರಕಾರ ಶಾಕ್ ನೀಡಿದೆ.

ಹುಧಾ ಮಹಾನಗರ ಪಾಲಿಕೆ ಆಯುಕ್ತರಾಗಿ ಮತ್ತೇ ಈ ಹಿಂದೆ ಅಧಿಕಾರ ವಹಿಸಿದ್ದ ರುದ್ರೇಶ ಗಾಳಿ ಅವರೇ ಮುಂದುವರೆಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.ಮೊನ್ನೆಯಷ್ಟೇ ಪಾಲಿಕೆ ಆಯುಕ್ತರ ಸ್ಥಾನದಿಂದ ರುದ್ರೇಶ ಘಾಳಿ ಅವರು ಶಿಕ್ಷಣ ಇಲಾಖೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದರು. ಪಾಲಿಕೆ ನೂತನ ಆಯುಕ್ತರಾಗಿ ಕೆಎಎಸ್ ಅಧಿಕಾರಿ ಮಂಜುನಾಥ ಡೊಂಬರ ಅವರು ನೇಮಕರಾಗಿದ್ದರು. ಇನ್ನೇನು ಇಂದು ಡೊಂಬರ ಅವರು ಪಾಲಿಕೆ ಕಮೀಷನರ್ ಖುರ್ಚಿ ಅಲಂಕಾರ ಮಾಡುವ ಮುನ್ನವೇ ಮತ್ತೊಂದು ಅಚ್ಚರಿಯ ಬದಲಾವಣೆಯಾಗಿದೆ.
ನಿನ್ನೆಯಷ್ಟೇ ಹುಧಾ ಮಹಾನಗರ ಪಾಲಿಕೆಯ ಆವರಣದಲ್ಲಿ ರುದ್ರೇಶ ಘಾಳಿ ಅವರು ವರ್ಗಾವಣೆ ತಡೆಯುವಂತೆ ಹುಧಾ ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಅಚ್ಚರಿಯಂತೆ ಡೊಂಬರ ಅವರು ಖರ್ಚಿ ಮೇಲೆ ಕುಳಿತುಕೊಳ್ಳುವ ಮುನ್ನವೇ ರುದ್ರೇಶ್ ಗಾಳಿ ಅವರು ಮತ್ತೇ ತಮ್ಮ ಖರ್ಚಿ ಮೇಲೆ ಕುಳಿತು ಅಧಿಕಾರ ಸ್ವೀಕರಿಸಿದ್ದಾರೆ.