ಹುಬ್ಬಳ್ಳಿ: ಒಂದೇ ಮನೆಯಲ್ಲಿ ವಾಸವಿದ್ದ ಎರೆಡು ಜನ ಭಿಕ್ಷುಕರ ಮದ್ಯ ಜಗಳ ಶುರುವಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ನಗರದ ಹಳೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಬಿಹಾರ್ ಮೂಲದ ವಿಶೇಷ ವಿಕಲಾಂಗ ಚೇತನ ಮಿತೇಶ ಮೃತ ವ್ಯಕ್ತಿ. ಇನ್ನೊಬ್ಬ ಬಿಹಾರ್ ಮೂಲದ ರಾಜೇಶ್ ಕುಮಾರ್ ಅಲಿಯಾಸ್ ನಜೀರ್ ಖಾನ್ ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ. ಇವರಿಬ್ಬರೂ ಬಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದು, ಒಂದೇ ಮನೆಯಲ್ಲಿ ವಾಸವಾಗಿದ್ದರು.

ನಿನ್ನೆ ರಾತ್ರಿ ಕುಡಿದು ಬಂದ್ ಮಿತೇಶ್ ರಾಜೇಶ್ ತಾಯಿಗೆ ಬೈದಿದ್ದಾನೆ, ಇದಕ್ಕೆ ಕೋಪಗೊಂಡ ರಾಜೇಶ್ ಮೈಕ್ ಸೆಟ್ ನಿಂದ ಮಿತೇಶ್ ತಲೆಗೆ ಹಲ್ಲೆ ಮಾಡಿದ್ದಾನೆ. ಗಾಯಗೊಂಡ ಮಿತೇಶ್ ನನ್ನು ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರು ಬೇಟಿ ನೀಡಿ ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹಳೇ ಹುಬ್ಬಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.