ಮೇ 25ರಂದು ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ನಲ್ಲಿ ನಡೆದ ಬಹುದೊಡ್ಡ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ವಿಜಯಪುರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಜನ ಪ್ರಮುಖ ಆರೋಪಿಗಳನ್ನು ಬಂಧಿಸಿ, ದೊಡ್ಡ ಪ್ರಮಾಣದ ಚಿನ್ನಾಭರಣ ಹಾಗೂ ನಗದು ವಶಕ್ಕೆ ಪಡೆದಿದ್ದಾರೆ.
ಪೊಲೀಸ್ ವರದಿಯ ಪ್ರಕಾರ, ಬ್ಯಾಂಕ್ ಲಾಕರ್ಗಳಿಂದ ಸುಮಾರು ₹53.26 ಕೋಟಿ ಮೌಲ್ಯದ 58.97 ಕೆ.ಜಿ ಚಿನ್ನಾಭರಣ ಹಾಗೂ ₹5.20 ಲಕ್ಷ ನಗದು ದೋಚಲಾಗಿತ್ತು. ಒಟ್ಟು ಕಳ್ಳತನದ ಮೊತ್ತ ₹53.31 ಕೋಟಿ ಎಂದು ಅಂದಾಜಿಸಲಾಗಿದೆ.
ಹುಬ್ಬಳ್ಳಿಯ ನಿವಾಸಿಗಳಾದ ವಿಜಯಕುಮಾರ ಮಿರಿಯಾಲ ಬ್ಯಾಂಕ್ ಸೀನಿಯರ್ ಮ್ಯಾನೇಜರ್, ಚಂದ್ರಶೇಖರ ನೆರೆಲ್ಲಾ (38) ಖಾಸಗಿ ಶಾಲೆಯ ಚೇರ್ಮನ್ ಹಾಗೂ ಸುನೀಲ ಮೋಕಾ (40) ಬಂಧಿತ ಆರೋಪಿಗಳಾಗಿದ್ದಾರೆ.
https://www.instagram.com/reel/DLZK-KtyIOu/?igsh=MWNuNmNxZXQ5aWF4Mg==
ಕಳ್ಳತನದ ಮಾಸ್ಟರ್ ಪ್ಲಾನ್ ಮಾಡಿಕೊಂಡ ಆರೋಪಿಗಳು, ಬ್ಯಾಂಕ್ ದರೋಡೆಗೆ ಬ್ಲ್ಯಾಕ್ ಮ್ಯಾಜಿಕ್ ಬಳಕೆ ಮಾಡಿ, ತನಿಖೆಯ ದಿಕ್ಕು ತಪ್ಪಿಸಲು ಸಂಚು ರೂಪಿಸಿದ್ದರು. ಆದರೆ, ನಮ್ಮ ಪೋಲಿಸ್ ತಂಡವು ತಮ್ಮ ಚಾಣಾಕ್ಷತೆಯಿಂದ ಆರೋಪಿಗಳ ಚಲನವಲನಗಳನ್ನು ಪತ್ತೆ ಹಚ್ಚಿ ಕಳವು ಪ್ರಕರಣವನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದೆ ಎಂದು ಪೋಲಿಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರಗಿ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸದ್ಯ ಬಂಧಿತರಿಂದ ₹10.75 ಕೋಟಿ ಮೌಲ್ಯದ 10.5 ಕೆ.ಜಿ ಚಿನ್ನಾಭರಣ, ಕರಗಿಸಿದ ಚಿನ್ನದ ಗಟ್ಟಿಗಳು ಮತ್ತು ದರೋಡೆಗೆ ಬಳಸಿದ ಎರಡು ಕಾರುಗಳು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಕೆಲವರು ಪರಾರಿಯಾಗಿದ್ದು, ಉಳಿದ ಚಿನ್ನ ಮತ್ತು ನಗದು ವಶಕ್ಕೆ ಮುಂದಿನ ತನಿಖೆ ತೀವ್ರಗೊಳಿಸಲಾಗಿದೆ ಎಂದು ಹೇಳಿದರು.
ಒಟ್ಟಿನಲ್ಲಿ ಇಡೀ ರಾಜ್ಯದ ಗಮನ ಸೆಳೆದಿದ್ದ ಈ ದರೋಡೆ ಪ್ರಕರಣದಲ್ಲಿ ವಿಜಯಪುರ ಪೊಲೀಸರು ತೋರಿದ ಕಾರ್ಯಕ್ಷಮತೆ ಜನಮನದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.