ಹುಬ್ಬಳ್ಳಿ: ರಸ್ತೆಯಲ್ಲಿ ಏನಾದರೂ ಸಿಕ್ರೆ ಸಾಕು ತಟ್ಟನೆ ಜೇಬಲ್ಲಿ ಇಟ್ಟುಕೊಳ್ಳುವ ಜನರ ನಡುವೆ ಹಣ ಸಿಕ್ಕರೆ ಬಿಡತ್ತಾರಾ? ಖಂಡಿತ ಇಲ್ಲ. ಆದರೇ ಹುಬ್ಬಳ್ಳಿಯಲ್ಲಿ ಬಾಲಕನೋರ್ವನಿಗೆ ರಸ್ತೆಯಲ್ಲಿ ಸಿಕ್ಕ 12 ಸಾವಿರ ಹಣವನ್ನು ಪ್ರಾಮಾಣಿಕವಾಗಿ ತಂದು \’ಪೊಲೀಸ್ ಠಾಣೆಗೆ ಒಪ್ಪಿಸಿ ಮಾನವೀಯತೆ\’ ಮೆರದಿದ್ದಾನೆ.
ಜನಜಂಗಳಿ ಇರುವಂತಹ ಹುಬ್ಬಳ್ಳಿ ನವನಗರದಲ್ಲಿ ನೂರಾರು ವಾಹನಗಳು, ನೂರಾರು ಜನರು ಓಡಾಡುವ ರಸ್ತೆಯಲ್ಲಿ ಸಿಕ್ಕಂತಹ 12 ಸಾವಿರ ಹಣವನ್ನು ನವನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಈ ಬಾಲಕ ಭಾರ್ಗವ ಶರ್ಮಾ \’ಪ್ರಜ್ಞಾವಂತರಿಗೆ\’ ಮಾದರಿಯಾಗಿದ್ದಾನೆ.
ಬಾಲಕನ ಕಾರ್ಯಕ್ಕೆ ನವನಗರ ಠಾಣೆಯ ಪೊಲೀಸ್ ಸಿಬ್ಬಂದಿಗಳು ಸನ್ಮಾನಿಸಿ ಗೌರವಿಸಿದ್ದಾರೆ.