ಹುಬ್ಬಳ್ಳಿ : ದೇಶದ ವಿವಿಧ ರಾಜ್ಯಗಳಲ್ಲಿ ಕೊಲೆ , ಸುಲಿಗೆ,ದರೋಡೆಯಂತಹ ಘೋರ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ \’ನಟೋರಿಯಸ್ ಕಳ್ಳ \”ನ ಕಾಲಿಗೆ ಗುಂಡು ಹಾರಿಸುವ ಮೂಲಕ ಹೋರ ರಾಜ್ಯದಿಂದ ಬಂದು ನಮ್ಮ ರಾಜ್ಯದ ಬೇರೆ ಬೇರೆ ಪ್ರದೇಶಗಳಲ್ಲಿ ಸುಲಿಗೆ, ದರೋಡೆ ಹಾಗೂ ಕಳ್ಳತನ ಮಾಡಿಕೊಂಡು ಪರಾರಿಯಾಗುತ್ತಿರುವ ಖದೀಮರಿಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸುವಲ್ಲಿ ಹುಬ್ಬಳ್ಳಿ-ಧಾರವಾಡ ಪೊಲೀಸ ಕಮಿಷನರೇಟ್\’ನ ಪೊಲೀಸರು ಯಶಸ್ವಿಯಾಗಿದ್ದಾರೆ.
ಕಳೆದ ಹತ್ತು ದಿನಗಳ ಹಿಂದೆ ಕೇಶ್ವಾಪೂರ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ನಡೆದ \’ಜ್ಯೂವೆಲ್ಲರಿ ಶಾಪ್\’ ವೊಂದರ ಕಳ್ಳತನ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಮುಂಬೈ ಮೂಲದ ಫರ್ಹಾನ್ ಶೇಖ್ ಎಂಬ ಅನಾಹುತ ಆಸಾಮಿಯನ್ನು ಕೇಶ್ವಾಪೂರ ಠಾಣೆಯ ಪೊಲೀಸರು ಪತ್ತೆ ಹಚ್ಚಿ ಬಂಧಿಸಿ ಕರೆತಂದಿದ್ದರು.
ಪ್ರಕರಣದ ಹೆಚ್ಚಿನ ತನಿಖೆ ಕುರಿತು ಆರೋಪಿಯನ್ನು ಗಾಮನಗಟ್ಟಿ ರಸ್ತೆಯ ತಾರಿಹಾಳ ಕ್ರಾಸ್ ಬಳಿ ಕರೆದ್ಯೊಯ್ದ ಸಂದರ್ಭದಲ್ಲಿ ಏಕಾಏಕಿ ಕರ್ತವ್ಯ ನಿರತ ಪೊಲೀಸ ಸಿಬ್ಬಂದಿಗಳ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸುತ್ತಿದ್ದಾಗ ಲೇಡಿ PSI ಕವಿತಾ ಮಾಡಗ್ಯಾಳ ತಮ್ಮ \’ಸರ್ವಿಸ್ ರಿವ್ಹಾಲ್ವಾರ್\’ದಿಂದ ಆರೋಪಿಯ ಕಾಲಿಗೆ ಪೈರಿಂಗ್ ಮಾಡಿದ್ದಾರೆ.
ಆರೋಪಿಯಿಂದ ಹಲ್ಲೆಗೊಳಗಾಗಿದ್ದ ಸಿಬ್ಬಂದಿ ಮಾಲತೇಶ ಹಾಗೂ ಮಹಿಳಾ ಸಿಬ್ಬಂದಿ ಸುಜಾತಾ ಮತ್ತು ಆರೋಪಿ ಫರ್ಹಾನ ಶೇಖ್\’ನನ್ನು ಕೂಡಲೇ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ ಯಾವುದೇ ಪ್ರಾಣಾಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಈ ಕುರಿತು ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಸಿಬ್ಬಂದಿ ಹಾಗೂ ಆರೋಪಿಯ ಆರೋಗ್ಯವನ್ನು ವಿಚಾರಿಸಿ ವೈದ್ಯರು ಹಾಗೂ ಪೊಲೀಸ ಅಧಿಕಾರಿಗಳಿಂದ ಮಾಹಿತಿ ಪಡೆದು ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಪೊಲೀಸ ಆಯುಕ್ತ ಎನ್, ಶಶಿಕುಮಾರ ಬಂಧಿತ ಆರೋಪಿಯು ದೊಡ್ಡ \’ನಟೋರಿಯಸ್\’ ಇದ್ದು ಈತನ ವಿರುದ್ಧ ಕರ್ನಾಟಕದ ಗುಲ್ಬರ್ಗ ಸೇರಿಂದಂತೆ ಗುಜರಾತಿನ ಸೂರತ್, ಆಂದ್ರಪ್ರದೇಶದ ಹೈದರಾಬಾದ್, ಮಹಾರಾಷ್ಟ್ರದ ಅಹ್ಮದನಗರ, ಮುಂಬೈನಲ್ಲಿ ಕೊಲೆ, ಸುಲಿಗೆ, ದರೋಡೆ\’ಯಂತಹ ಹಲವಾರು ಘೋರ ಪ್ರಕರಣಗಳು ದಾಖಲಾಗಿವೆ ಮತ್ತು ಈತನ ಸಹಚರರ ಬಂಧನಕ್ಕಾಗಿ ನಮ್ಮ ತಂಡಗಳು ಮಹಾರಾಷ್ಟ್ರ ಹಾಗೂ ಇತರೆ ರಾಜ್ಯಗಳಲ್ಲಿ ಕಡೆಗಳಲ್ಲಿ ಬೀಡು ಬಿಟ್ಟಿದೆ ಶೀಘ್ರದಲ್ಲಿಯೇ ಅವರನ್ನು ಸಹ ಬಂಧಿಸಲಾಗುವುದು ಎಂದು ತಿಳಿಸಿದರು.
ಅದೇನೇ ಇರಲಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ \”ಲೇಡಿ PSI ಕವಿತಾ ಮಾಡಗ್ಯಾಳ\”ರ ಧೈರ್ಯ ನಿಜಕ್ಕೂ ಶ್ಲಾಘನೀಯ ನೂತನ ಪೊಲೀಸ ಆಯುಕ್ತ ಎನ್, ಶಶಿಕುಮಾರ ಅಧಿಕಾರ ವಹಿಸಿಕೊಂಡಾಗಿನಿಂದ ಕೆಳ ಹಂತದ ಸಿಬ್ಬಂದಿಗಳಲ್ಲಿ ಆತ್ಮಸ್ಥೈರ್ಯ ಮತ್ತು ಧೈರ್ಯ ಹೆಚ್ಚಾದಂತೆ ಕಾಣುತ್ತಿದೆ ಕಾರಣ ಈ ಕ್ಷಣಕ್ಕೆ ಅವಳಿನಗರದ ಜನರಲ್ಲಿ ಪೊಲೀಸರು ಭರವಸೆ ಮೂಡಿಸುತ್ತಿರುವದಂತು ಸತ್ಯ \”ಹ್ಯಾಟ್ಸ್ ಅಫ್ ಟು ಹುಬ್ಬಳ್ಳಿ-ಧಾರವಾಡ ಪೊಲೀಸ್ \” ನಮ್ಮ ಪೊಲೀಸ್ ನಮ್ಮ ಹೆಮ್ಮೆ…