ಹುಬ್ಬಳ್ಳಿ: ಮೊನ್ನೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೂಟೌಟ್ ನಲ್ಲಿ ಗಾಯಗೊಂಡ ಅಫ್ತಾಬ್ ತಂದೆ ಪೋಲಿಸ್ ಕಮಿಷನರ್ ಅವತ್ಕರಿಗೆ ತನ್ನ ಇಬ್ಬರು ಮಕ್ಕಳನ್ನು ಶೂಟ್ ಮಾಡಿ ಸಾಯಿಸಿ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರ ಮುಂದೆ ಪರಿಪರಿಯಾಗಿ ಬೇಡಿಕೊಂಡ ಘಟಬಸ ಹುಬ್ಬಳ್ಳಿಯ ಬ್ಯಾಹಟ್ಟಿ ಪ್ಲಾಟ್ ನಲ್ಲಿ ಕಂಡು ಬಂದಿದೆ.
ಎರಡು ದಿನಗಳ ಹಿಂದೆ ರೌಡಿ ಶೀಟರ್ ಗಳ ನಡುವೆ ಗ್ಯಾಂಗ್ ವಾರ್ ನಡೆದಿತ್ತು. ರೌಡಿ ಶೀಟರ್ ಜಾವೂರ್ ಬೇಪಾರಿ ಕೊಲೆಗೆ ಯತ್ನಿಸಿ ಅಪ್ತಾಭ್ ಕರಡಿಗುಡ್ಡ ಪರಾರಿಯಾಗಿದ್ದ. ಅಪ್ತಾಭ್ ನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಆಗ ಅಪ್ತಾಭ್ ನ ಕಾಲಿಗೆ ಗುಂಡೇಟು ನೀಡಿದ್ದರು.
ಶೂಟ್ ಮಾಡಿದ ನಂತರ ಆರೋಪಿ ಅಪ್ತಾಭ್ ನ ಮನೆಗೆ ಭೇಟಿ ನೀಡಿದ ಪೊಲೀಸ್ ಆಯುಕ್ತ ಶಶಿಕುಮಾರ್ ಮುಂದೆ ಕಣ್ಣೀರಿ ಹಾಕುತ್ತಾ ನನ್ನ ಮಕ್ಕಳಿಬ್ಬರನ್ನು ಶೂಟ್ ಮಾಡಿ ಸಾಯಿಸಿ ಎಂದು ಅಪ್ತಾಭ್ ನ ತಂದೆ ಗೌಸಸಾಬ್ ಕಮಿಷನರ್ ಎದುರು ಬೇಡಿಕೊಂಡಿದ್ದರು.
ನನ್ನ ಮಕ್ಕಳು ನನ್ನ ಮತ್ತು ಕುಟುಂಬದ ಗೌರವವನ್ನು ಹಾಳು ಮಾಡಿದ್ದಾರೆ. ಮಕ್ಕಳು ಒಳ್ಳೆಯವರಾಗಲಿ ಎಂದು ಮದುವೆ ಮಾಡಿ,ಹೊಟೇಲ್ ಹಾಕಿಕೊಟ್ಟೆ ಸುಧಾರಣೆಯಾಗುತ್ತಿಲ್ಲ. ದುಡಿಯದೇ ಇಂತಹ ಚಟುವಟಿಕೆ ಮಾಡುತ್ತಾ ನಮ್ಮ ಗೌರವ ಹಾಳು ಮಾಡಿದ್ದಾರೆ. ಪ್ಲೀಸ್ ಅವರಿಬ್ಬರನ್ನು ಶೂಟ್ ಮಾಡಿ ಸಾಯಿಸಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾರೆ. ಪೊಲೀಸ್ ಆಯುಕ್ತರ ಕೈ ಹಿಡಿದುಕೊಂಡು ಆರೋಪಿಯ ತಂದೆ ಗೌಸ್ ಸಾಬ್ ಮಕ್ಕಳ ಕುರಿತಂತೆ ನೋವು ತೋಡಿಕೊಂಡಿದ್ದಾರೆ.