ಸಭೆಯ ಅಧ್ಯಕ್ಷತೆಯನ್ನು ವಹಿಸಿದ ಪೋಲಿಸ್ ಆಯುಕ್ತ ಎನ್ ಶಶಿಕುಮಾರ ಅವರು ಮಾತನಾಡಿ, ಎಲ್ಲ ಸಮಸ್ಯೆಗೆ ಒಂದೇ ಪರಿಹಾರ ಅದುವೇ ಶಿಕ್ಷಣ. ಈ ಎರಡೂ ಹಬ್ಬ ಶಾಂತಿಯುತವಾಗಿ ಆಚರಿಸುವುದು ನಿಮ್ಮೆಲ್ಲರ ಜವಾಬ್ದಾರಿ. ಯಾರೋ ಒಬ್ಬ ಕಿಡಿಗೇಡಿಯಿಂದ ಸಮಸ್ಯೆ ಆದರೆ ಅವರಿಗೆ ಧರ್ಮದ ಬಣ್ಣ ಕೊಡುವುದು ಬೇಡ. ಎಲ್ಲ ಧರ್ಮದಲ್ಲೂ ಇಂತವರು ಇರುತ್ತಾರೆ. ಯಾರೊಬ್ಬರ ಗಮನಕ್ಕೆ ಬಂದರೆ ತಕ್ಷಣ ನಮಗೆ ತಿಳಿಸಬೇಕು, ನಾವು ಕ್ರಮ ಕೈಗೊಳ್ಳುತ್ತೇವೆ.
ಪ್ರತಿದಿನ ಒಂದೊಂದು ಏರಿಯಾ ವಿಸಿಟ್ ಮಾಡುತ್ತಿದ್ದೇವೆ. ಒಂದೊಂದು ಠಾಣೆಯ ಸೂಕ್ಷ್ಮ ಪ್ರದೇಶದಲ್ಲಿ ಸಂಚಾರ ಮಾಡಿ, ಅಲ್ಲಿಯ ಧರ್ಮಗುರು, ಮುಖಂಡರು, ವರ್ತಕರು, ವ್ಯಾಪಾರಿಗಳು, ಸಾರ್ವಜನಿಕರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದೇವೆ. ಎಲ್ಲ ಧರ್ಮದವರೂ ಶಾಂತಿಯಿಂದ ಇದ್ದಾರೆ. ಶಾಂತಿ ಕೆಡಿಸುವವರು ಯಾರೂ ಯಶಸ್ವಿಯಾಗಿಲ್ಲ. ಎಲ್ಲ ಧರ್ಮದವರು ಸೌಹಾರ್ದತೆಯಿಂದ ಇದ್ದಾರೆ.
ಎಲ್ಲರೂ ಶ್ರಮಿಕರೇ ಇಲ್ಲಿ ಉದ್ದವರು. ದುಡಿದು ತಿನ್ನುವವರ ಸಂಖ್ಯೆಯೇ ಹೆಚ್ಚು. ಅವರಿಗೆ ಯಾವ ಧರ್ಮವೂ ಇಲ್ಲ. ಕಾಯಕವೇ ಧರ್ಮ ಅವರದ್ದು. ಬಹಳಷ್ಟು ಹಿಂದುಳಿದ ಪ್ರದೇಶ ನಗರದಲ್ಲಿ ಇದೆ. ಅಲ್ಲಿಯ ಸ್ಥಿತಿಗತಿ ನೋವುಂಟು ಮಾಡಿದೆ ದಯನೀಯ ಸ್ಥಿತಿ ಅಲ್ಲಿ ಇದೆ. ಶಿಕ್ಷಣದ ಅರಿವು ಇಲ್ಲ. ಅವರಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ನಮ್ಮಿಂದಾಗಬೇಕು.
ದಲಿತ ಸಂಘಟನೆ, ಮುಸ್ಲಿಂ ಸಮುದಾಯದವರಲ್ಲಿ ಶಿಕ್ಷಣ ಮರಿಚಿಕೆಯಿದೆ ಕನಿಷ್ಠ ಹತ್ತನೇ ತರಗತಿಯಾದರೂ ಪಾಸು ಮಾಡಬೇಕು. ಏನಾದರೂ ಕೆಲಸ ಮಾಡಿ ಜೀವನ ನಿರ್ವಹಿಸುತ್ತಾರೆ. ಖಾಲಿ ಮನಸ್ಸು, ಜ್ಞಾನವಿಲ್ಲದ ತಲೆ ದೆವ್ವಗಳ ಕಾರ್ಯಾಗಾರ ಆಗಿರುತ್ತದೆ. ಆಗ ವೈಯಕ್ತಿಕ ಹಿತಾಸಕ್ತಿ, ಷೇಡು, ದ್ವೇಷ, ಜಗಳ ಆರಂಭವಾಗುತ್ತದೆ. ಸಮಾಜದ ಶಾಂತಿಕದಡುತ್ತದೆ.
ಕೋಮು ಸೌಹಾರ್ದತೆ ಆರೋಗ್ಯಕರವಾಗಿರಬೇಕು. ಸವಾಲು ಇರಬೇಕು, ಧರ್ಮಗಳ ನಡುವೆ ಶಿಕ್ಷಣದ ಕುರಿತು. ದೇವಸ್ಥಾನ, ಮಸೀದಿಗಳ ನಡುವೆ ಇಂತಹ ಸ್ಪರ್ಧೆ ಏರ್ಪಡಬೇಕು. ಆಗ, ಸಣ್ಣ-ಪುಟ್ಟ ಗಲಾಟೆಗಳು ನಡೆಯುವುದೇ ಇಲ್ಲ.
ನಾನು ಅಧಿಕಾರ ವಹಿಸಿಕೊಂಡ ಮೇಲೆ 15 ಕ್ಕೂ ಹೆಚ್ಚು ಪ್ರಕರಣ, 100ರಷ್ಟು ಪೆಡ್ಲರ್‌ಗಳನ್ನು ಜೈಲಿಗೆ ಕಳುಹಿಸಿದ್ದೇವೆ. ಪಿನ್‌ಪಾಂಯ್ಟೆಡ್ ಕಾರ್ಯಾಚರಣೆ ಬಳಕೆದಾರರ ಮಾಹಿತಿ. ಮೊದಲ ಕಾರ್ಯಾಚರಣೆಯಲ್ಲಿ 59 ಪ್ರಕರಣ ದಾಖಲಿಸಿ 250 ಮಂದಿ ಬಂಧಿಸಿದ್ದೇವೆ. 750 ಮಂದಿ ಗಾಂಜಾ ವ್ಯಸನಿಗಳನ್ನು ಬಂಧಿಸಿ, 150 ಪ್ರಕರಣ ದಾಖಲಿಸಿದ್ದೇವೆ. 300 ಕ್ಕೂ ಹೆಚ್ಚು ಸಿಬ್ಬಂದಿ ಈ ಕಾರ್ಯ ನಿರ್ವಹಿಸಿದ್ದಾರೆ.
ಮೀಟರ್ ಬಡ್ಡಿ ಬಗ್ಗೆ ಕಡ್ಡಾಯವಾಗಿ ದೂರು ಕೊಡಬೇಕು. ದೂರಿನ ಅನ್ವಯ 25 ಕ್ಕೂ ಹೆಚ್ಚು ಪ್ರಕರಣ ದಾಖಲಿಸಿಕೊಂಡು, 50ಮಂದಿ ಮೀಟರ್ ಬಡ್ಡಿ ದಂಧೆಕೋರರ ಬಂಧನ ಮಾಡಿ ಜೈಲಿಗೆ ಅಟ್ಟಿದ್ದೇವೆ. ಇದನ್ನು ಗಮನಿಸಿದ ಕೆಲ ಬಡ್ಡಿ ವ್ಯವಹಾರಸ್ಥರು ದೂರು ನೀಡಬೇಡಿ, ಅನುಕೂಲವಾದಾಗ ದುಡ್ಡು ಕೊಡಿ ಎಂದು ಹೇಳುತ್ತಿದ್ದಾರೆ. ಅದಕ್ಕೆ ಎಲ್ಲ ಜನಪ್ರತಿನಿಧಿಗಳು ಸಹಕಾರ ನೀಡಿದ್ದಾರೆ. ಯಾವ ಪಕ್ಷದವರೂ ನಮಗೆ ಒತ್ತಡ ತಂದಿಲ್ಲ.
ಪೋಷಕರಿಗೆ ತೊಂದರೆ ನೀಡುವ ಗಾಂಜಾ ವ್ಯಸನಿಗಳನ್ನು ಡಿಎಡಿಕ್ಸನ್ ಸೆಂಟರ್‌ಗೆ ಕಳುಹಿಸಲಾಗುವುದು. ನಮ್ಮ ಮುಂದಿನ ಕಾರ್ಯಾಚರಣೆ ಇದೆ ಆಗಲಿದೆ. ಜನರ ರಕ್ಷಣೆ, ಶಾಂತಿ ಕಾಪಾಡುವುದು ನಮ್ಮ ಜವಾಬ್ದಾರಿ ಆಗಿದೆ. ಯಾವುದೇ ಕ್ರಮ ಕೈಗೊಳ್ಳಲು ನಮ್ಮ ಪೊಲೀಸ ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಿದ್ದೇನೆ. ಯಾವುದೇ ಕಾನೂನು ಬಾಹಿರ ಕೃತ್ಯ ನಡೆಸಿದರೆ, ಮುಲಾಜಿಲ್ಲದೆ ಎಲ್ಲಿ ಕಳುಹಿಸಬೇಕೋ ಅಲ್ಲಿ ಕಳುಹಿಸುತ್ತೇವೆ. ನಮಗೂ ಕುಟುಂಬವಿದೆ ನಮ್ಮ ಪೊಲೀಸ ಕುಟುಂಬಗಳಿಗೆ ಹಬ್ಬ ಆಚರಿಸಲು ಅವಕಾಶ ಕೊಡಿ.
ಹಾಗೂ ಕೊನೆದಾಗಿ ಡಿಜೆ 10 ಕ್ಕೆ ಕ್ಲೋಸ್ ಮಾಡಿ. ಮನೆಯವರನ್ನು ಕರೆದುಕೊಂಡು ಗಣಪತಿ ನೋಡಿ. ಅದು ನಿಜವಾದ ಹಬ್ಬ. ಕುಡಿದು, ಮೋಜು ಮಸ್ತಿ ಮಾಡುವುದಲ್ಲ ಎಂದರು.