ಹುಬ್ಬಳ್ಳಿ: ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದ 10 ನೇ ಜಾತ್ರಾಮಹೋತ್ಸವ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನವೆಂಬರ್ 16 ರಿಂದ 24 ರವರೆಗೆ ನಗರದ ನವನಗರದ ನಂದೀಶ್ವರ ನಗರದ ಕೆ.ಎಚ್.ಬಿ.ಕಾಲೋನಿಯಲ್ಲಿ ಶ್ರೀ ಪಂಚಮುಖಿ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಂಡಳಿಯ ಖಜಾಂಚಿ ಸುನೀಲ್ ರೇವಣಕರ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತ್ರಾಮಹೋತ್ಸವದ ನಿಮಿತ್ತವಾಗಿ ನವೆಂಬರ್ 16 ಹಾಗೂ 17 ರಂದು ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಕಣ್ಣಿನ ತಪಾಸಣಾ ಶಿಬಿರ, ಹೃದಯ ತಪಾಸಣಾ ಶಿಬಿರಗಳು ಜರುಗಲಿದೆ. ನವೆಂಬರ್ 20 ರಂದು ವಿವಿಧ ವಾದ್ಯ ಮೇಳಗಳೊಂದಿಗೆ ಕುಂಭಮೇಳ ಪ್ರಾರಂಭವಾಗಲಿದೆ. 21 ರಂದು ಪೂಜೆ ಹವನ ಜಾತ್ರಾಮಹೋತ್ಸವ ನೆರವೇರುವುದು, 22 ರಂದು ಸಂಜೆ 5 ಗಂಟೆಗೆ ನೃತ್ಯ ಕಾರ್ಯಕ್ರಮ, 23 ರಂದು ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ, 24 ರಂದು ಸಾಯಂಕಾಲ ಸಂಗೀತ ಸಂಜೆ ರಸಮಂಜರಿ ಕಾರ್ಯಕ್ರಮ ಇರಲಿದೆ ಎಂದರು. ಜಾತ್ರಾಮಹೋತ್ಸವ ನಿಮಿತ್ತವಾಗಿ ನೂರಾರು ಮಹಿಳೆಯರಿಂದ ಕುಂಭಮೇಳ ನೆರವೇರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಅಧ್ಯಕ್ಷರಾದ ಬಾಲರಾಜ್ ದೊಡ್ಡಮನಿ, ಉಪಾಧ್ಯಕ್ಷ ಸೂರಜ್ ಬಿ ಗೌಡ, ಕಾರ್ಯದರ್ಶಿ ಪ್ರಶಾಂತ ಪೂಜಾರಿ, ಸದಸ್ಯರಾದ ಮಲ್ಲಯ್ಯ ಹಿರೇಮಠ್, ಓಂಕಾರ್ ದೊಡ್ಡಮನಿ ಹಾಗೂ ಇರ್ಫಾನ್ ಹವಾಲ್ದಾರ್ ಉಪಸ್ಥಿತರಿದ್ದರು.