ಧಾರವಾಡ: ಇಷ್ಟು ದಿನ ಶಾಂತವಾಗಿದ್ದ ಹು-ಧಾ ಇದೀಗ ಕ್ಷುಲ್ಲಕ ವಿಚಾರ, ಆಸ್ತಿ, ಹಳೆಯ ದ್ವೇಷಕ್ಕೆ ಕೊಲೆಗಳು ನಡೆಯುತ್ತಲೇ ಇವೆ. ಇದಕ್ಕೆ ಧಾರವಾಡದ ವಿಮಲ್ ಹೊಟೆಲ್ ಕುಕ್ ಮರ್ಡರ್ ಕೂಡ ಸೇರ್ಪಡೆ ಆಗಿದೆ.
ಹೌದು, ಧಾರವಾಡದ ಪ್ರತಿಷ್ಠಿತ ವಿಮಲ್ ಹೊಟೆಲ್\’ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದ ಫಕ್ಕಿರೇಶ ಪ್ಯಾಟಿ ಎಂಬಾತನನ್ನು ಮಂಗಳವಾರ ರಾತ್ರಿ ರಾಡ್\’ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದು ಬೆಳಿಗ್ಗೆ ಬೆಳಕಿಗೆ ಬಂದಿದೆ.
ಈತ ಹಲವಾರು ವರ್ಷಗಳಿಂದ ಇಲ್ಲಿನ ಸಂಗಮ್ ಸರ್ಕಲ್\’ನಲ್ಲಿನ ವಿಮಲ್ ಹೊಟೆಲ್\’ನಲ್ಲಿ ಕುಕ್ ಆಗಿ ಕೆಲಸ ಮಾಡುತ್ತಿದ್ದ, ಆದರೆ ಯಾವ ಕಾರಣಕ್ಕೆ ಫಕ್ಕಿರೇಶನನ್ನು ಹತ್ಯೆ ಮಾಡಲಾಗಿದೆ ಎಂದು ತಿಳಿದುಬಂದಿಲ್ಲ.
ಇನ್ನು ಫಕ್ಕಿರೇಶನನ್ನು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಮೂಲದ ಕನ್ಯೆಯಪ್ಪ ಕನ್ನಯ್ಯ ಕೇ ಎಂಬಾತನೇ ಹತ್ಯೆ ಮಾಡಿದ್ದಾನೆ ಎಂದು ಹೇಳಲಾಗುತ್ತಿದ್ದು, ಸದ್ಯ ಸ್ಥಳಕ್ಕೆ ಧಾರವಾಡ ಶಹರ ಠಾಣೆಯ ಪೋಲಿಸರು ಭೇಟಿ ನೀಡಿದ್ದು, ಪರಿಶೀಲನೆ ಕಾರ್ಯ ನಡೆಸಿದ್ದಾರೆ.
ಫಕ್ಕಿರೇಶ ಪ್ಯಾಟಿ ಹತ್ಯೆ ಕುರಿತು ಪೋಲಿಸ್ ತನಿಖೆಯಿಂದ ಇನ್ನಷ್ಟೇ ಮಾಹಿತಿ ತಿಳಿದುಬರಬೇಕಿದೆ.
ನಿರೀಕ್ಷಿಸಿ ಸಂಪೂರ್ಣ ವರದಿಗಾಗಿ…