ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ಸತತ ದಿನ ಕೊಲೆಗಳು ನಡೆದಿದ್ದು, ಈ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಹು-ಧಾ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಪರಾಧ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜನರಿಗೆ ಪ್ರಾಣ ಬೆದರಿಕೆ ಇದ್ದಲ್ಲಿ ಪೊಲೀಸರ ಗಮನಕ್ಕೆ ತರಲು ಕೇಳುತ್ತಿದ್ದೇವೆ. ಯಾವುದಕ್ಕೂ ಹಿಂಜರಿಯದೇ ಪೊಲೀಸರನ್ನು ಸಂಪರ್ಕಿಸಬೇಕು. ಇದರಿಂದಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದ ಅವರು ಸಂಬಂಧಿಸಿದವರನ್ನು ಕರೆಯಿಸಿ ಎಚ್ಚರಿಕೆ ನೀಡುವ ಪ್ರಯತ್ನ ಮಾಡುತ್ತೇವೆ ಎಂದರು.
ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಧ್ಯಪ್ರವೇಶಿಸಲು ಆಗುವುದಿಲ್ಲ. ಆದರೇ ಇದರಲ್ಲಿ ಗಲಾಟೆ ಸಾಧ್ಯತೆ ಇದ್ದಲ್ಲಿ ಇಬ್ಬರ ಮೇಲೂ ಕೇಸ್ ದಾಖಲು ಮಾಡುತ್ತೇವೆ. ಇದರಿಂದಾಗಿ ಮುಂಜಾಗ್ರತಾ ಕ್ರಮ ತಗೆದುಕೊಳ್ಳಬಹುದು ಎಂದರು.
ಧಾರವಾಡ ನಗರದಲ್ಲಿ ಪೊಲೀಸರ ಓಡಾಟ ಹೆಚ್ಚಾಗಿದ್ದು, ಎಲ್ಲೆಡೆ ನಿಗಾವಹಿಸಿ ಓಡಾಡುತ್ತಿದ್ದಾರೆ. ಇದರಿಂದ ಜನರಲ್ಲಿ ಧೈರ್ಯ ಬರುತ್ತದೆ. ಅಪರಾಧ ಚಟುವಟಿಕೆವುಳ್ಳವರಿಗೂ ಭಯ ಇದ್ದಂತೆ ಆಗುತ್ತದೆ. ಸುಮ್ಮನೇ ಓಡಾಡುವುದಿಲ್ಲ ಅಪರಾಧ ತಡೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಪೊಲೀಸ ಠಾಣೆಯಲ್ಲಿ ಕೆಲ ಪೊಲೀಸರ ಹೊರತು ಪಡಿಸಿ ಯಾರು ಇರುವಂತಿಲ್ಲ..!
ಹುಬ್ಬಳ್ಳಿ-ಧಾರವಾಡ ಕಮೀಷನರೇಟ್ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಪೊಲೀಸರು ಇರುವಂತಿಲ್ಲ. ಅದರ ಹೊರತಾಗಿ ನಗರದಲ್ಲೇಡೆ ಹದ್ದಿನ ಕಣ್ಣಿಟ್ಟು ಬೀಟ್ ನಲ್ಲಿರಬೇಕಿದೆ.
ಅಪರಾಧಗಳ ಸಂಖ್ಯೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಪೊಲೀಸರು ನಗರದಲ್ಲೇಡೆ ಸಂಚರಿಸಬೇಕಿದ್ದು, ಠಾಣೆಯಲ್ಲಿ ಪೊಲೀಸರು ಇದ್ದರೇ ಅಂತವರ ಮೇಲೂ ಕ್ರಮ ಕೈಗೊಳ್ಳಲಾಗುವುದು ಎಂದು ಕಮೀಷನರ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದಾರೆ.