ಹುಬ್ಬಳ್ಳಿ: ಚಾಲಾಕಿ ಕಳ್ಳರು ಅಂಗಡಿವೊಂದರ ಗ್ಲಾಸ್ ಒಡೆದು ಒಳ ನುಗ್ಗಿ ಲಕ್ಷಾಂತರ ರೂ. ನಗದು ದೋಚಿ ಪರಾರಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.
ಹುಬ್ಬಳ್ಳಿಯ ಮೂರುಸಾವಿರಮಠದ ದ್ವಾರಬಾಗಿಲ ಪಕ್ಕದಲ್ಲಿರುವ ರಾಥೋಡ್ ಕುಟುಂಬಕ್ಕೆ ಸೇರಿದ ರಾಠೋಡ ಕಿಚನ್ ವೇರ್ ಅಂಗಡಿಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಾಯಾಗಿರುವ ಕಳ್ಳರ ಬಲೆಗೆ ಪೊಲೀಸರು ಬಲೆ ಬೀಸಿದ್ದು, ಕಮರಿಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.