ಹುಬ್ಬಳ್ಳಿ: ಮನೆಯೊಂದರಲ್ಲಿ ಕಳ್ಳರು ಯಾರೂ ಇಲ್ಲದ ಸಮಯ ನೋಡಿ ಬೀಗ ಮುರಿದು ಸಾವಿರಾರು ರೂ. ಮೌಲ್ಯದ ವಸ್ತುವನ್ನು ದೋಚಿ ಪರಾರಿಯಾದ ಘಟನೆ ಭಾನುವಾರ ತಡರಾತ್ರಿ ನಗರದ ಹಳೇ ಹುಬ್ಬಳ್ಳಿಯ ಘೋಡ್ಕೆ ಪ್ಲಾಟ್ ನಲ್ಲಿ ನಡೆದಿದೆ.
ನೂರ್ಜಹನ್ ಸವಣೂರು ಅವರಿಗೆ ಸೇರಿದ ಮನೆಯಲ್ಲಿ ಕಳ್ಳತನವಾಗಿದ್ದು, ಮನೆಯಲ್ಲಿದ್ದ ಸುಮಾರು 20 ಸಾವಿರ ಮೌಲ್ಯದ ತಾಮ್ರದ ವಸ್ತುವೊಂದನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಮನೆಯಲ್ಲಿ ಲಾಕರ್ ನಲ್ಲಿದ್ದ ಬಂಗಾರದ ಆಭರಣಗಳು ಯಥಾಸ್ಥಿತಿ ಇದ್ದು, ದೊಡ್ಡ ಕಳ್ಳತನವೊಂದು ತಪ್ಪಿದಂತಾಗಿದೆ.
ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು, ತನಿಖೆ ಮುಂದೊರೆದಿದೆ.