ಹುಬ್ಬಳ್ಳಿ: ಮೊಬೈಲ್ ಲೋನ್ ಕಟ್ಟಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಸೆಂಟ್ರಿಂಗ್ ಕೆಲಸದ ಮಾಲೀಕ ಹಾಗೂ ಆತನ ಸಹಚರರಿಂದ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಗರದ ಆನಂದನಗರದ ಘೋಡ್ಕೆ ಪ್ಲಾಟ್ ನಲ್ಲಿ ನಡೆದಿರುವುದಾಗಿ ತಿಳಿದುಬಂದಿದೆ.
ಆನಂದನಗರದ ಘೋಡ್ಕೆ ಪ್ಲಾಟ್ ನ ನಿವಾಸಿ ಜಿಯಾ ಎಂಬ ವ್ಯಕ್ತಿಯೇ ಹಲ್ಲೆಗೊಳಗೊಂಡಾತ. ಈತ ಅಕ್ಬರ್ ಎಂಬ ವ್ಯಕ್ತಿಯ ಹತ್ತಿರ ಸೇಂಟ್ರಿಂಗ್ ಕೆಲಸಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆ ಸಂದರ್ಭದಲ್ಲಿ ಮಾಲಿಕನಾದ ಅಕ್ಬರ್ ಎಂಬ ವ್ಯಕ್ತಿಯ ಸಹಾಯದಿಂದ ಲೋನ್ ಮೂಲಕ ಮೊಬೈಲ್ ಖರೀದಿ ಮಾಡಿದ್ದ. ಮೊಬೈಲ್ ಲೋನ್ ಕಂತುಗಳನ್ನು ಜಿಯಾ ಸರಿಯಾದ ಸಮಯಕ್ಕೆ ಪಾವತಿಸಿಲ್ಲ ಎಂಬ ಕಾರಣಕ್ಕಾಗಿ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದು, ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.